ಮತದಾನ ಕುರಿತು ಜಾಗೃತಿ ಕಾರ್ಯಕ್ರಮ
ಹಾಸನ: ನಗರದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಕಾಲೇಜಿನ ಕಲಾಸಂಘ, ಸಮಾಜಶಾಸ್ತ್ರ ವಿಭಾಗದ ಸಬಲೀಕರಣ ವೇದಿಕೆ, ಕನ್ನಡ ಸಂಘ, ವಿಜ್ಞಾನಸಂಘ, ವಾಣಿಜ್ಯ ಸಂಘ, ಯೂನಿಯನ್ - ಹೀಗೆ ಎಲ್ಲರೂ ಸಭಾಂಗಣದಲ್ಲಿ ಸೇರಿ ಪ್ರಾಂಶುಪಾಲರು, ಬೋಧಕವರ್ಗ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸೇರಿ ಕಡ್ಡಾಯ ಮತದಾನದ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಏರ್ಪಡಿಸಿ ಮತದಾನದ ಪ್ರತಿಜ್ಞೆ ಮಾಡಲಾಯಿತು.
ವೆಬ್ಸೈಟ್ಗಳಲ್ಲಿ ರಾಜಕಾರಣಿಗಳ ಮಾಹಿತಿ?
ಹಾಸನ: ಲೋಕಸಭೆ ಚುನಾವಣೆ - 2014 ಮಾದರಿ ನೀತಿ ಸಂಹಿತೆ ಈಗಾಗಲೇ ಜಾರಿಯಲ್ಲಿರುವುದರಿಂದ ಎಲ್ಲಾ ಸರ್ಕಾರಿ ಮತ್ತು ಸಚಿವರ ವೆಬ್ಸೈಟ್ಗಳಲ್ಲಿ ರಾಜಕಾರಣಿ ಸಚಿವರಿಗೆ ಸಂಬಂಧಿಸಿದ ಮಾಹಿತಿಗಳನ್ನು ತೆರವುಗೊಳಿಸಲು ಹಾಗೂ ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ ಸೂಚಿಸಿದ್ದಾರೆ.