ಮತದಾರರ ಜಾಗೃತಿ ಜಾಥಾ
ಚನ್ನರಾಯಪಟ್ಟಣ: ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕ ಹಾಗೂ ತಾಲ್ಲೂಕು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಬಾಗಿತ್ವ ಸಮಿತಿ ವತಿಯಿಂದ ಇತ್ತೀಚೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮತದಾರರ ಹಕ್ಕು ಜಾಗೃತಿ ಜಾಥದಲ್ಲಿ ವಿವಿಧ ಘೋಷಣೆಗಳು ಹಾಗೂ ಜಾಗೃತಿ ಹಾಡುಗಳ ಮುಖಾಂತರ ಮತದಾರರನ್ನು ಜಾಗೃತಿಗೊಳಿಸಲಾಯಿತು.
ತಾಲೂಕು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಬಾಗಿತ್ವ ಸಮಿತಿಯ ಸದಸ್ಯರುಗಳಾದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಮೃತ್ಯುಂಜಯ, ಸಹಾಯಕ ಕಾರ್ಯ ನಿರ್ವಹಣಾ ಅಭಿಯಂತರ ಫಣೀಶ್, ತಾಲ್ಲೂಕು ಪಂಚಾಯಿತಿ ಸಹಾಯಕ ನಿದೇಶಕ ಜಯರಾಮ್, ಪ್ರಾಂಶುಪಾಲ ಪ್ರೊ.ಎಂ.ಕೆ. ಉಮನಾಥ್ ಮುಂತಾದವರು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲಾಯಿತು.