ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶಾಸಕರ ಬೆಂಬಲಿಗರಿಂದ ಜನರ ದಾರಿ ತಪ್ಪಿಸುವ ಹುನ್ನಾರ

Rashmi Kasaragodu
Updated On : 23 Mar 2014, 11:46 am

ಕ.ಪ್ರ. ವಾರ್ತೆ ಟಿ ಅರಸೀಕೆರೆ ಟಿ ಮಾ. 23:  ಕಾಮಗಾರಿಗಳ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿರುವುದಾಗಿ ತಮ್ಮ ವಿರುದ್ದ  ಶಾಸಕರು ವೃಥಾ ಅಪಪ್ರಚಾರ ಮಾಡುತ್ತಿರುವುದಾಗಿ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ  ವಿಜಯ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿ ಬಗ್ಗೆ ತಾವು ಯಾವುದೇ ರೀತಿಯಲ್ಲಿ ಅಡ್ಡಗಾಲು ಹಾಕುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕಳಪೆ ಕಾಮಗಾರಿಯನ್ನು ನಿಲ್ಲಿಸಿ, ಅದನ್ನು ಸರಿಪಡಿಸಿಕೊಂಡು ರಸ್ತೆಯ ಕಾಮಗಾರಿ ಪರಿಪೂರ್ಣ ಮಾಡಲು ಸಾಧ್ಯವಾಗದ ಶಾಸಕರ ಬೆಂಬಲಿಗರು ತಮ್ಮ ಮೇಲೆ ಸಲ್ಲದ ಆರೋಪ ಮಾಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ದೂರು ನೀಡಿದ್ದೆ: ತಾಲೂಕಿನ ಕಣಕಟ್ಟೆ ಹೋಬಳಿಯ ಮಾಡಾಳು ಗ್ರಾಮದ ಸಮೀಪದ ಡಾಂಬರ್ ರಸ್ತೆಯ ಕಾಮಾಗಾರಿ ಬಗ್ಗೆ ತಾವು ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಆದರೆ, ಹಾಸನ ಮಾರ್ಗದ ಬೊರನಕೊಪ್ಪಲು ಹಾಗೂ ಯಳವಾರೆ ಗ್ರಾಮದ ಮಧ್ಯೆ ಡಾಂಬರ್ ರಸ್ತೆಯ ಕಾಮಗಾರಿ ಅತ್ಯಂತ ಕಳಪೆ ಗುಣಮಟ್ಟದಲ್ಲಿ ನಡೆಯುತ್ತಿದ್ದ ಕಾರಣ ಈ ಹಿಂದೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಪರಿಶೀಲನೆ ನಡೆಸುವಂತೆ ನಾನು ದೂರು ನೀಡಿದ್ದು ಸತ್ಯ ಎಂದರು.
ಕಾಮಗಾರಿ ನಿಲ್ಲಲು ನಾನು ಕಾರಣ ಅಲ್ಲ: ಅಲ್ಲದೇ, ಸಾಮಗ್ರಿಗಳ ಸರಬರಾಜಿನಲ್ಲಿ ತೊಂದರೆ ಉಂಟಾಗಿ ಕಾಮಗಾರಿ ನಿಂತಿದೆ. ಈ ಬಗ್ಗೆ ಲೋಕೋಪಯೋಗಿ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸ್ಪಷ್ಟ ಉತ್ತರ ಸಿಗುತ್ತಿಲ್ಲ.  
ಆದರೆ, ಸಾಮಗ್ರಿಗಳ ಸರಬರಾಜಿನಲ್ಲಿನ ತೊಂದರೆ ಮುಚ್ಚಿಡುತ್ತಿರುವ ಶಾಸಕರ ಬೆಂಬಲಿಗರು, ಸತ್ಯಾಂಶ ಮರೆಮಾಚಿ, ನಾನು ಲೋಕೋಪಯೋಗಿ ಇಲಾಖೆಗೆ ನೀಡಿದ್ದ ದೂರಿನ ಅರ್ಜಿಯನ್ನೇ ನೆಪ ಮಾಡಿಕೊಂಡು ಕಾಮಗಾರಿ ನಿಲ್ಲಲು ಆ ದೂರು ಕಾರಣ ಎಂದು ಜನತೆಯ ದಾರಿ ತಪ್ಪಿಸುತ್ತಿದ್ದಾರೆ.
ಉದ್ಧಟತನ ಸಲ್ಲದು: ಸತತ ನಾಲ್ಕು ಬಾರಿ ಗಂಡಸಿ ಕ್ಷೇತ್ರವನ್ನು ಪ್ರತಿನಿಧಿಸಿದ ಬಿ. ಶಿವರಾಂ ಬಗ್ಗೆ ಇತ್ತೀಚೆಗೆ ಸ್ಥಳೀಯ ಶಾಸಕರು ಬಹಿರಂಗ ವೇದಿಕೆಗಳಲ್ಲಿ ಅಷ್ಟು ಸಮಂಜಸವಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ಉದ್ಧಟತನ ಪ್ರದರ್ಶಿಸುತ್ತಿದ್ದಾರೆ ಎಂದ ಅವರು, ಇಂತಹ ಮನೋಪ್ರವೃತ್ತಿಯನ್ನು ಶಾಸಕರು ತಕ್ಷಣ ಕೈ ಬಿಡಬೇಕೆಂದು ಆಗ್ರಹಿಸಿದರು. ಎತ್ತಿನಹೊಳೆ ನೀರಾವರಿ ಯೋಜನೆ ಅನುಷ್ಠಾನ ಸ್ವಾಗತಿಸುವ ಶಾಸಕರು ಕಾಂಗ್ರೆಸ್  ಪಕ್ಷದ ಮುಖಂಡರ ಹೇಳಿಕೆ ಬಗ್ಗೆ ಕಿಡಿಕಾರುವುದು ಏಕೆ ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಘಟಕದ ಸಹ ಕಾರ್ಯದರ್ಶಿ ಬಿ. ಪ್ರಕಾಶ್, ಸದಸ್ಯ ಸಿ.ಬಿ. ರಾಮಚಂದ್ರ, ಅಜೇಯ, ಯೂನಸ್ ಹಾಗೂ ಶ್ರೀನಿವಾಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement