ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶೋಷಣೆ ತಪ್ಪಿಸಲು ನಾನಾ ಸಂಘಟನೆಗಳ ಆಗ್ರಹ

Rashmi Kasaragodu
Updated On : 23 Mar 2014, 11:58 am

ಅರಸೀಕೆರೆ: ಪಟ್ಟಣದ ಹೋಟೆಲ್‌ಗಳ ಮಾಲೀಕರು ಕಾಫಿ ತಿಂಡಿಗಳ ಬೆಲೆ ಏರಿಕೆ ಮಾಡುವ ಗ್ರಾಹಕರನ್ನು ಶೋಷಣೆ ಮಾಡುವ ಮೂಲಕ ಹಣ ಮಾಡುವ ದಂಧೆಗಿಳಿದಿದ್ದು, ಈ ಬಗ್ಗೆ ತಾಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪಟ್ಟಣದ ಹಲವಾರು ಸಂಘ ಸಂಸ್ಥೆಗಳ ಸದಸ್ಯರು ಪತ್ರಕರ್ತ ಎ. ಶಿವರಾಜ್ ನೇತೃತ್ವದಲ್ಲಿ ತಹಸೀಲ್ದಾರ್ ನಟರಾಜ್ ಅವರಿಗೆ ಮನವಿ ಸಲ್ಲಿಸಿದರು.
ಕೆಲವು ಹೋಟೆಲ್‌ಗಳಲ್ಲಿ ಕಳಪೆ ಗುಣಮಟ್ಟದ ಪದಾರ್ಥಗಳನ್ನು ತಯಾರಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಸಾರ್ವಜನಿಕರಿಗೆ ವಂಚಿಸುತ್ತಿದೆಯಲ್ಲದೆ ಸ್ವಚ್ಛತೆಯ ಗಮನ ನೀಡದೇ ಹೆಚ್ಚಿನ ಬೆಲೆ ಪಡೆಯುವ ಇವರು, ಶುದ್ಧ ಕುಡಿಯುವ ನೀರನ್ನು ನೀಡದೆ ಗ್ರಾಹಕರಿಗೆ ಅನಾರೋಗ್ಯ ಉಂಟಾಗಲು ಕಾರಣರಾಗಿರುತ್ತಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪಟ್ಟಣದ ಎಲ್ಲಾ ಹೋಟೆಲ್‌ಗಳನ್ನು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement