ಅಂಚೆ ಪೇದೆಗಳಿಗೆ ಸನ್ಮಾನ
ಹೊಳೆನರಸೀಪುರ: ಇಲ್ಲಿನ ವಾಸವಿ ಕ್ಲಬ್ ಪದಾಧಿಕಾರಿಗಳು ಅಂಚೆಯಣ್ಣಂದಿರ ಸೇವೆ ಸ್ಮರಿಸಲು ಪಟ್ಟಣದ ಅಂಚೆ ಕಚೇರಿಗೆ ತೆರಳಿ ಇಲ್ಲಿನ ಅಂಚೆಯಣ್ಣಂದಿರನ್ನು ಆತ್ಮೀಯವಾಗಿ ಗೌರವಿಸಿ ಅವರ ಸೇವೆಯನ್ನು ಸ್ಮರಿಸುವ ಔದಾರ್ಯದ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ವಾಸವಿ ಕ್ಲಬ್ ಸಹಾಯಕ ಗೌರ್ನರ್ ಎ.ಆರ್. ರವಿಕುಮಾರ್, ನಮ್ಮ ಸಮಾಜದ ಸೇವೆ ಮಾಡುತ್ತಿರುವವರಲ್ಲಿ ಭಾರತೀಯ ಅಂಚೆ ಇಲಾಖೆಯ ಅಂಚೆಪೇದೆಗಗಳೂ ಒಬ್ಬರಾಗಿರುವುದರಿಂದಲೇ, ಇಂದಿಗೂ ದೇಶದ ಉದ್ದಗಲಕ್ಕೂ ಉತ್ತಮ ಸೇವೆ ನೀಡಿ ಅಂಚೆ ಇಲಾಖೆಗೆ ಒಳ್ಳೆಯ ಹೆಸರು ಬರಲು ಕಾರಣವೆಂದು ಅಂಚೆಯಣ್ಣಂದಿರ ಸೇವೆ ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಪಟ್ಟಣದ ಅಂಚೆ ಇಲಾಖೆಯಲ್ಲಿ ಅಂಚೆ ಪೇದೆಗಳಾಗಿ ಸೇವೆ ಸಲ್ಲಿಸುತ್ತಿರುವ ನಾಗಾಚಾರ್, ಶಿವಯೋಗಿ, ಬಸವಣ್ಣ, ಯೋಗೇಶ್, ಧರ್ಮಪಾಲ್ ಹಾಗೂ ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು. ವಿ.ಸಿ. ಜಯಣ್ಣ, ವಿಭಾಗಿಯ ಅಧ್ಯಕ್ಷ ಜಿ. ನಟರಾಜು ಹಾಗೂ ವಾಸವಿ ಕ್ಲಬ್ ಅಧ್ಯಕ್ಷ ಎಸ್. ಗೋಕುಲ್ ಇದ್ದರು. ಸನ್ಮಾನ ಸಮಾರಂಭದಲ್ಲಿ ವಾಸವಿಕ್ಲಬ್ ಖಜಾಂಚಿ ಪಿವಿಎನ್ ವೆಂಕಟಸುಬ್ಬಮೂರ್ತಿ, ಕ್ಲಬ್ ಸದಸ್ಯ ಕೆ.ಕೆ. ಮುರುಳಿಧರಗುಪ್ತ ಇದ್ದರು.