ಅಕ್ರಮ ಮರಳು ಟ್ರ್ಯಾಕ್ಟರ್ ವಶ
ಬೇಲೂರು: ಅಕ್ರಮವಾಗಿ ಮರಳನ್ನು ತುಂಬಿಸಿದ್ದ ಟ್ರ್ಯಾಕ್ಟರ್ನ್ನು ಬಿಕ್ಕೋಡು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಕೋಗಿಲೆಮನೆ ಗ್ರಾಪಂ ವ್ಯಾಪ್ತಿಯ ಕುತ್ತಲಮಟ್ಟಿ ಅರಣ್ಯದ ಪಕ್ಕದಲ್ಲಿ ಹರಿಯುತ್ತಿರುವ ವಾಟೆಹೊಳೆ ನದಿಯಿಂದ ಅಕ್ರಮವಾಗಿ ಮರಳನ್ನು ಟ್ರ್ಯಾಕ್ಟರ್ನಲ್ಲಿ ತುಂಬಿ ಸಾಗಿಸುವ ಸಂದರ್ಭದಲ್ಲಿ ಕೊತ್ತನಹಳ್ಳಿ ಸಂತೋಷ್ ಎಂಬುವರು ನೀಡಿದ ದೂರಿನ ಅನ್ವಯ ಸ್ಥಳಕ್ಕೆ ಬೇಟಿ ನೀಡಿದ ಪೊಲೀಸರು ಟ್ರಾಕ್ಟರ್ ವಶ ಪಡಿಸಿಕೊಂಡಿದ್ದಾರೆ.