ಏ.6ರಂದು ಮನೆ ಮನೆ ಕವಿಗೋಷ್ಠಿ
ಹಾಸನ: ಹಾಸನದ ಶಾಂತಿನಗರದ ತೇಜೂರು ರಸ್ತೆಯ ಎಂ.ಜಿ.ಆರ್ ಕಿಡ್ಸ್ನಲ್ಲಿ ಶ್ರೀಮತಿ ವೇದಶ್ರೀರಾಜ್ರವರ ಪ್ರಾಯೋಜಕತ್ವದಲ್ಲಿ 205ನೇ ಮಾಸಿಕ ಮನೆ ಮನೆ ಕವಿಗೋಷ್ಠಿಯನ್ನು ಏ.6 ರಂದು ಸಂಜೆ 4.30ಕ್ಕೆ ಹಮ್ಮಿಕೊಳ್ಳಲಾಗಿದೆ.
ಸರ್ಕಾರಿ ವಿಜ್ಞಾನ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ನಾರಾಯಣಪ್ರಸಾದ್ ಅವರಿಂದ ಸಾಹಿತ್ಯ ಪ್ರಸಾರದಲ್ಲಿ ಆಧುನಿಕ ತಂತ್ರಜ್ಞಾನವಾದ ಬ್ಲಾಗಿಂಗ್ ಪಾತ್ರ ಎಂಬ ವಿಷಯದಡಿ, ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸ ನಡೆಯಲಿದ್ದು, ನಂತರ ಜಿಲ್ಲೆಯ ಹಿರಿ-ಕಿರಿಯ ಕವಿ-ಕವಯತ್ರಿಯರಿಂದ ಕವಿತೆವಾಚನ ನಡೆಯಲಿದೆ ಎಂದು ಸಂಚಾಲಕ ಕೊಟ್ರೇಶ್ ಎಸ್. ಉಪ್ಪಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗಾಗಿ 9483470794-ಸಂಚಾಲಕರು ಹಾಗೂ 8050301298- ಪ್ರಾಯೋಜಕರು ಸಂಖ್ಯೆಗೆ ಸಂಪರ್ಕಿಸಬಹುದು.
ಸ್ವಚ್ಛತೆಗೆ ಆದ್ಯತೆ ನೀಡಿ
ಬೇಲೂರು: ಇಲ್ಲಿನ ಪುರಸಭೆಗೆ ನೂತನ ಅಧ್ಯಕ್ಷರಾಗಿ ಇತ್ತೀಚೆಗೆ ಅಯ್ಕೆಯಾದ ಬಿ. ಗಿರೀಶ್ ಅವರಿಗೆ ಕರವೇಯಿಂದ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಅಧ್ಯಕ್ಷ ಚಂದ್ರಶೇಖರ್, ಬೇಲೂರು ಪಟ್ಟಣ ವಿಶ್ವ ಪ್ರಸಿದ್ಧಿ ತಾಣವಾಗಿದ್ದು, ಇಲ್ಲಿಗೆ ನಿತ್ಯ ನೂರಾರು ಪ್ರವಾಸಿಗರು ದೇಶ-ವಿದೇಶದಿಂದ ಬಂದು ಹೋಗುತ್ತಾರೆ, ಪಟ್ಟಣದಲ್ಲಿ ಸ್ವಚ್ಛತೆಗೆ ಹೆಚ್ಚು ಮಹತ್ವ ನೀಡಬೇಕು. ಪಟ್ಟಣದ ಯುಜಿಡಿ, ಒಳಚರಂಡಿ, ರಸ್ತೆ, ಫುಟ್ಪಾತ್ ವ್ಯಾಪಾರಿಗಳ ಸಮಸ್ಯೆಗಳ ಬಗ್ಗೆ ನೂತನ ಅಧ್ಯಕ್ಷರು ಗಮನ ಹರಿಸಿ ಪರಿಹರಿಸಬೇಕು ಎಂದರು. ಈ ಸಂದರ್ಭದಲ್ಲಿ ಕರವೇ ಪ್ರಧಾನ ಕಾರ್ಯದರ್ಶಿ ಖಾದರ್, ನಗರ ಉಪಾಧ್ಯಕ್ಷ ರೋಮಿ, ಕುಮಾರ್, ನಿಂಗರಾಜು ಇದ್ದರು.
ಸಿನಿಮಾ ಪ್ರದರ್ಶನ
ಜಾವಗಲ್: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇಂಗ್ಲಿಷ್ ವಿಭಾಗದ ವತಿಯಿಂದ ದ್ವಿತೀಯ ಬಿ.ಎ. ವಿದ್ಯಾರ್ಥಿಗಳಿಗಾಗಿ ಷೇಕ್ಸ್ಪಿಯರ್ ವಿರಚಿತ ದಿ ಮರ್ಚೆಂಟ್ ಆಫ್ ವೆನಿಸ್ ನಾಟಕ ಆಧರಿಸಿ ತಯಾರಿಸಲಾದ ದಿ ಮರ್ಚೆಂಟ್ ಆಫ್ ವೆನಿಸ್ ಫಿಲ್ಮ್ ಶೋ ಕಾರ್ಯಕ್ರಮ ನಡೆಯಿತು. ಪ್ರಾಂಶುಪಾಲ ಡಾ.ಕೆ. ಭಾಷಾ , ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಬಿ. ಶಿವಕುಮಾರ್, ಸಹ ಪ್ರಾಧ್ಯಾಪಕ ಶಂಕರಲಿಂಗೇಗೌಡ, ಶಿವಶಂಕರ ಮೂರ್ತಿ ಹಾಗೂ ಉಪನ್ಯಾಸಕರು ಇದ್ದರು.
ಅರ್ಜಿ ಆಹ್ವಾನ
ಹಾಸನ: ನಗರದಲ್ಲಿ ಸುಮಾರು 40 ಮಂದಿ ಸ್ವಯಂ ಪ್ರೇರಣೆಯಿಂದ ಟ್ರಾಫಿಕ್ ವಾರ್ಡನ್ಗಳಾಗಿ ಸೇವೆ ಸಲ್ಲಿಸುತ್ತಿದ್ದು, ಈ ಬಗ್ಗೆ ಆಸಕ್ತಿ ಇರುವ ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ. ವಿವರಗಳಿಗೆ ಮೊ.9480 8 04749 ಸಂಪರ್ಕಿಸಬಹುದು.