'ಜನಾಂಗದ ಏಳಿಗೆಗೆ ಶ್ರಮಿಸಿ'
ಹಾಸನ: ಕುರುಹಿನಶೆಟ್ಟಿ ಜನಾಂಗದವರು ಒಗ್ಗಟ್ಟಾಗಿ ಜನಾಂಗದ ಏಳಿಗೆಗೆ ಶ್ರಮಿಸಬೇಕೆಂದು ಜಿಪಂ ಮಾಜಿ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ ಕರೆ ನೀಡಿದರು.
ನಗರದ ರಂಗೋಲಿ ಹಳ್ಳದ ಕುರುಹಿನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿ, ಜನಾಂಗದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಧನ ಸಹಾಯ ಮಾಡಬೇಕು ಎಂದು ಸಲಹೆ ನೀಡಿದರು. ಭಾಗವಹಿಸಿದ್ದ ಜನಾಂಗದವರ ಅಭಿಪ್ರಾಯ ಹಾಗೂ ಸಲಹೆಯನ್ನು ಕೇಳಿದರು. ಇರುವ ಜನಾಂಗದ ಕಲ್ಯಾಣ ಮಂಟಪವನ್ನು ಕೇವಲ ಮದುವೆಗೆ ಸೀಮಿತಗೊಳಿಸಿದೆ, ಇತರೆ ಕಾರ್ಯಕ್ರಮಗಳಿಗೂ ಉಪಯೋಗಿಸಿ ಬರುವ ಹಣವನ್ನು ಜನಾಂಗದ ಅಭಿವೃದ್ಧಿಗೆ ವಿನಿಯೋಗಿಸಿಕೊಳ್ಳುವಂತೆ ಸದಸ್ಯರು ಸಲಹೆ ನೀಡಿದರು. ಕುರುಹಿನಶೆಟ್ಟಿ ಸಂಘದ ಅಧ್ಯಕ್ಷ ಪುಟ್ಟಸ್ವಾಮಿಶೆಟ್ಟಿ, ಕಾರ್ಯದರ್ಶಿ ಬಿ. ಗೋಪಾಲ್, ನಿರ್ದ್ದೇಶಕರು ಪ್ರೇಮಮ್ಮ, ರಾಮಶೆಟ್ಟರು, ಕುಮಾರಸ್ವಾಮಿ, ಪುಟ್ಟಣ್ಣ, ಲೋಕೇಶ್, ಕೇಶವಮೂರ್ತಿ, ಚಂದ್ರಶೇಖರ್, ರಂಗಸ್ವಾಮಿ, ಕೃಷ್ಣಶೆಟ್ಟರು, ರಾಮಣ್ಣ, ಗೋವಿಂದಶೆಟ್ಟರು ಇದ್ದರು.