ಟೆಂಡರ್ ಪದ್ಧತಿಗೆ ಸ್ವಾಗತ
ಕ.ಪ್ರ. ವಾರ್ತೆ ಹಾಸನ ಮಾ.24
ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಟೆಂಡರ್ ಪದ್ಧತಿಯಲ್ಲಿ ಖಾಸಗಿ ಮಾರುಕಟ್ಟೆಯನ್ನು ಪ್ರತ್ಯೇಕವಾಗಿ ನಡೆಸಲು ನೀಡಿರುವ ಅನುಮತಿ ಹೊರತುಪಡಿಸಿ ಉಳಿದೆಲ್ಲ ನಿಯಮಗಳು ರೈತ ಪರವಾಗಿರುವುದರಿಂದ ಅದನ್ನು ತಾವು ಸ್ವಾಗತಿಸುವುದಾಗಿ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಪಟ್ಟಣದ ಎಪಿಎಂಸಿ ಆವರಣದ ರೈತ ಭವನದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ವರ್ತಕರಿಗೆ ಈ ನಿಯಮದಿಂದ ತೊಂದರೆಗಳಿದ್ದರೆ ನೇರವಾಗಿ ಸರ್ಕಾರಕ್ಕೆ ಮನವಿ ಮಾಡಿ. ಆದರೆ ಈ ಟೆಂಡರ್ ಪದ್ಧತಿಯಿಂದ ರೈತರಿಗೆ ಅನ್ಯಾಯವಾಗುತ್ತದೆ ಎಂದು ರೈತರ ಹೆಸರಿನಲ್ಲಿ ವಿರೋದ ಮಾಡುವುದು ಬೇಡ ಎಂದರು.
2003ರಲ್ಲಿ ಕೇಂದ್ರ ಸರ್ಕಾರ ಹೊಸ ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ತಂದಿತು. ಅದರಲ್ಲಿ ಅಂಶಾಂಶಗಳು ರೈತ ವಿರೋಧಿಯಾಗಿದ್ದರಿಂದ ಅದನ್ನು ವಿರೋಧಿಸಿ ಸಂಸತ್ ಭವನದ ಮುಂದೆ ರೈತರು ಪ್ರತಿಭಟನೆ ಮಾಡಿದ್ದರಿಂದ ಆ ಕಾಯ್ದೆಯಲ್ಲಿ ಅನೇಕ ಬದಲಾವಣೆಗಳನ್ನು ತಂದು 2013ರ ಈ ಟೆಂಡರ್ ಪದ್ಧತಿಯನ್ನು ಜಾರಿಗೊಳಿಸಿದ್ದು, ಕರ್ನಾಟಕ ಸರ್ಕಾರ ಭಾರತ ಸರ್ಕಾರದ ನೀತಿಯನ್ನು ಅಳವಡಿಸಿಕೊಂಡು ಪ್ರಾಯೋಗಿಕವಾಗಿ ಕೊಬ್ಬರಿ ಮಾರುಕಟ್ಟೆಯಾದ ಅರಸಿಕೆರೆ ತಿಪಟೂರು ಹಾಗೂ ಅರಿಶಿಣ ಮಾರುಕಟ್ಟೆಯಾದ ಚಾಮರಾಜನಗರದಲ್ಲಿ ಜಾರಿಗೆ ತಂದಿದೆ ಎಂದು ವಿವರಿಸಿದರು.
ಇದರಲ್ಲಿ ಒಪ್ಪಬಹುದಾದ ಹಾಗೂ ವಿರೋಧಿಸಬೇಕಾದ 2 ಅಂಶಗಳಿದ್ದು ಎಪಿಎಂಸಿ ಮಾರುಕಟ್ಟೆಯಲ್ಲದೆ ಖಾಸಗಿ ವ್ಯಾಪರಸ್ಥರು ಖಾಸಗಿ ಮಾರುಕಟ್ಟೆಯನ್ನು ನಿರ್ಮಿಸಲು ಅನುಮತಿ ನೀಡಿದ್ದು ಇದರಿಂದ ಕೃಷಿ ಉತ್ಪನ್ನ ಮರುಕಟ್ಟೆ ವ್ಯವಸ್ಥೆ ಹಾಳಾಗಿ ಖಾಸಗಿ ಮಾರುಕಟೆಯನ್ನು ಉಳಿಸಿಕೊಳ್ಳಬಹುದಾಗಿರುವುದರಿಂದ ಖಾಸಗಿ ಮಾರುಕಟ್ಟೆ ವಿಚಾರವನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದರು.
ಒಪ್ಪಬಹುದಾದ ಅಂಶವೆಂದರೆ ರೈತರು 33 ವರ್ಷಗಳಿಂದ ಒತ್ತಾಯ ಮಾಡುತ್ತಿದ್ದ ರೈತರು ತಂದ ವಸ್ತುಗಳು ಅಂತಾರಾಜ್ಯಗಳಲ್ಲಿ ನೇರ ಮಾರುಕಟ್ಟೆ ಒದಗಿಸುವುದು ಈ ಕಾಯ್ದೆಯೊಳಗೆ ಅಳವಡಿಸಲಾಗಿದ್ದು, ದೇಶದ ವಿವಿಧ ರಾಜ್ಯಗಳ ಮಾರುಕಟ್ಟೆಗಳ ಖರೀದಿದಾರರು ಅಂತರ್ ಜಾಲದಲ್ಲಿ ರೈತರ ಮಾಲುಗಳನ್ನು ಖರೀದಿ ಮಾಡುವ ಅವಕಾಶವಿದ್ದು ಈ ಪೈಪೋಟಿ ಕೆಲವೆ ದಿನಗಳಲ್ಲಿ ಹೆಚ್ಚಾಗಿ ರೈತರಿಗೆ ಉತ್ತಮ ಬೆಲೆ ದೊರೆಯಬಹುದಾಗಿದೆ. ಇನ್ನು ಕೆಲವೆ ದಿನಗಳಲ್ಲಿ ರೈತರು ಬೆಳೆದ ಬೆಳೆಗಳಿಗೆ ಈ ಟೆಂಡರ್ ಪದ್ಧತಿ ಅನ್ವಯಿಸಲಿದೆ ಎಂದು ತಿಳಿಸಿದರು.
ರೈತರಿಗೆ ಇದರಿಂದ ತೊಂದರೆಯಾಗುತ್ತದೆ ಎಂದು ಈ ಕಾಯ್ದೆಯ ಬಗ್ಗೆ ಅಪಪ್ರಚಾರ ಮಾಡುವುದನ್ನು ನಿಲ್ಲಿಸಿ ಹಾಗೂ ರೈತರು ವ್ಯಾಪಾರಸ್ಥರು ನಮ್ಮ ಮಾಲುಗಳನ್ನು ಕೊಳ್ಳದೆ ಅನಾನುಕೂಲತೆ ಉಂಟಾಗುತ್ತದೆ ಎಂಬ ಅನುಮಾನ ಬೇಡ ರೈತರೇ ಟೆಂಡರ್ ಹಾಕಿ ರೈತರ ಮಾಲುಗಳನ್ನು ಕೊಂಡು ಕೊಳ್ಳಲು ಸಿದ್ಧವಿದ್ದು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು. ತೈತ ಪರವಾಗಿ ಬಂದಿರುವ ಈ ವರದಿಯನ್ನು ಕೆಲವು ತಿಳುವಳಿಕೆ ಇಲ್ಲದ ರೈತರು ವಿರೋಧಿಸಿದ್ದು ಸ್ವಾಭಿಮಾನಿ ಚಳುವಳಿಗಾರರು ಬ್ರಷ್ಟಚಾರ ವಿರೋಧಿಸಿ ಹೋರಾಟ ಮಾಡಿದವರು ರೈತ ಪರವಾಗಿ ಬಂದಿರುವ ಈ ಟೆಂಡರ್ ಪದ್ಧತಿಯ ಅನುಕೂಲತೆ ಪಡೆಯಬೇಕೆಂದು ಕರೆನಿಡಿದರು.
ಬ್ಯಾಂಕ್ ಅಧಿಕಾರಿಗಳಿಗೆ ಎಚ್ಚರಿಕೆ: ಬ್ಯಾಂಕ್‌ಗಳಿಂದ ಸಾಲ ಪಡೆದ ರೈತರ ಆಸ್ತಿ ಜಪ್ತಿ ಹರಾಜು ಮಾಡಲು ಬ್ಯಾಂಕ್ ಅಧಿಕಾರಿಗಳು ಮುಂದಾಗಿದ್ದು ಅದನ್ನು ತಕ್ಷಣ ನಿಲ್ಲಿಸಬೇಕು, ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆಯಾದ ನಂತರ ಜಪ್ತಿ ಹರಾಜು ನಿಲ್ಲಿಸಿದರೆ ಅದು ಸಿದ್ದರಾಮಯ್ಯನವರ ಆಡಳಿತಕ್ಕೆ ಮೂರು ಕಾಸಿನ ಬೆಲೆ ಇಲ್ಲ ಎಂದೆ ಅರ್ಥ. ಈ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸದಿದ್ದರೆ ಜಪ್ತಿಗೆ ಬಂದ ಅಧಿಕಾರಿಗಳನ್ನು ಕಂಬಕ್ಕೆ ಕಟ್ಟಲು ರೈತರಿಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.
1982ರಲ್ಲಿ ಕರ್ನಾಟಕ ಉಚ್ಚನ್ಯಾಯಾಲಯ ರೈತರ ಜಮೀನು ಟ್ಯ್ರಾಕ್ಟರ್ ಹರಾಜು ಮಾಡದಂತೆ ತಡೆರ್ಯಾಜ್ಞೆ ನೀಡಿದ್ದು ಬ್ಯಾಂಕ್ ಅಧಿಕಾರಿಗಳು ಜಪ್ತಿ ಮಾಡಲು ಪುಂಡರ ಗುಂಪನ್ನು ಕರೆದೊಯ್ಯುತ್ತಿದ್ದು ಇದು ಕಾನೂನಿನ ರೀತಿಯಲ್ಲಿ ಅಪರಾಧವಾಗುತ್ತದೆ. ಆದ್ದರಿಂದ ಅಧಿಕಾರಿಗಳು ತಕ್ಷಣ ಹರಾಜು ಜಪ್ತಿ ನಿಲ್ಲಿಸಿ ಇಲ್ಲದಿದ್ದರೆ ತಾವು ರೈತರಿಗೆ ತಾವೇ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಜಿಲ್ಲಾ ಕಾರ್ಯದರ್ಶಿ ಜಯರಾಂ, ತಾಲೂಕು ಅಧ್ಯಕ್ಷ ಮೇಳೇನಹಳ್ಳಿ ಸ್ವಾಮಿ, ಕೆಂಕೆರೆ ಶಿವಣ್ಣ, ಮಂಜೇಗೌಡ, ಚಿಕ್ಕೂರು ಮೂರ್ತಿ, ಮಣಿ ಗೊಲ್ಲರಹಳ್ಳಿ ನಿಂಗಪ್ಪ ಇದ್ದರು.