ನಾಲ್ಕು ನಾಮಪತ್ರಗಳ ಸಲ್ಲಿಕೆ
ಹಾಸನ: ಹಾಸನ ಜಿಲ್ಲಾ ಲೋಕಸಭೆಗೆ ಸ್ಪರ್ಧಿಸಲು ಸೋಮವಾರ ಬಿಜೆಪಿ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಸೇರಿದಂತೆ ನಾಲ್ವರು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಿಂದ ಸಿ.ಎಚ್. ವಿಜಯಶಂಕರ್, ಆಮ್‌ಆದ್ಮಿ ಅಭ್ಯರ್ಥಿಯಾಗಿ ಮೋಹನ್ ಸಂತೋಷ್, ಪಕ್ಷೇತರ ಅಭ್ಯರ್ಥಿಯಾಗಿ ಹೊಳೆನರಸೀಪುರ ಮಹೇಶ್ ಮತ್ತು ಅರಸೀಕೆರೆ ತಾಲೂಕು ನಿರಗುಂದ ಗ್ರಾಮದ ಪುಟ್ಟಯ್ಯ ನಾಮಪತ್ರ ಸಲ್ಲಿಸಿದ್ದಾರೆ.
ವಿಜಯಶಂಕರ್‌ಗಿಂತ ಪತ್ನಿಯೇ ಶ್ರೀಮಂತೆ
ಹಾಸನ: ಬಿಜೆಪಿ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಅವರಿಗಿಂತ ಅವರ ಪತ್ನಿಯೇ ಹೆಚ್ಚು ಶ್ರೀಮಂತರು. ಸೋಮವಾರ ವಿಜಯಶಂಕರ್ ಸಲ್ಲಿಸಿರುವ ಆಸ್ತಿ ವಿವರ ಸಲ್ಲಿಸಿದ್ದು, ಆದರ ಪ್ರಕಾರ, ವಿಜಯಶಂಕರ್ ಅವರ ಬಳಿ 225 ಕುರಿ, # 64,10,782 ಮೌಲ್ಯದ ಸ್ಥಿರ ಮತ್ತು ಚರ ಅಸ್ತಿ ಹೊಂದಿದ್ದರೇ, ಅವರ ಪತ್ನಿ ಬಬಿತಾ ಅವರ ಹೆಸರಿಲ್ಲಿ # 1.48 ಕೋಟಿ ಆಸ್ತಿ ಹೊಂದಿದ್ದಾರೆ. ವಿಜಯಶಂಕರ್ ಅವರು ಮೈಸೂರಿನ ನಜರಬಾದ್ ಕನರಬ್ಯಾಂಕ್ ಶಾಖೆಯಲ್ಲಿ # 7208, ಬೆಂಗಳೂರಿನ ಅಪೆಕ್ಸ್ ಬ್ಯಾಂಕಿನಲ್ಲಿ # 26, 46, 782 ಉಳಿತಾಯ ಹಣ ಇಟ್ಟಿದ್ದರೇ, ಬಬಿತಾ ಅವರು ಎಸಿಬಿಎಂ ಶಾಖೆಯಲ್ಲಿ 50, 589 ಹಣ ಹೊಂದಿದ್ದಾರೆ.