ಬಿಎಸ್ಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಚಾಲನೆ
ಬೇಲೂರು: ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಾ. ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡದೆ ದಲಿತ ವರ್ಗಕ್ಕೆ ಅನ್ಯಾಯ ಮಾಡಿದ್ದು, ಜನರು ಈ ಬಾರಿ ಬಿಎಸ್ಪಿ ಪಕ್ಷಕ್ಕೆ ಬೆಂಬಲ ನೀಡುತ್ತಾರೆ ಎಂದು ಬಿಎಸ್ಪಿ ಜಿಲ್ಲಾ ಉಪಾಧ್ಯಕ್ಷ ರಾಜು ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಬಿಎಸ್ಪಿ ಅಭ್ಯರ್ಥಿ ಎ.ಪಿ.ಅಹಮ್ಮದ್ ಪರ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿ ದೇಶದ ಸಂಪತ್ತುನ್ನು ಕೊಳ್ಳೆ ಹೊಡೆದಿದ್ದಾರೆ ಎಂದರು.
ಅಭ್ಯರ್ಥಿ ಎ.ಪಿ. ಅಹಮದ್ ಮಾತನಾಡಿ, ಜಿಲ್ಲೆಯಲ್ಲಿ ಕುಟುಂಬ ರಾಜಕಾರಣ ಮಾಡುತ್ತಿರುವ ಜೆಡಿಎಸ್ಗೆ ಅಂತ್ಯ ಕಾಲ ಬಂದಿದೆ. ಸಿದ್ದರಾಮಯ್ಯನವರ ಸರ್ಕಾರ ಜಾತಿ-ಧರ್ಮಗಳನ್ನು ಒಡೆದು ಆಳ್ವಿಕೆ ಮಾಡುತ್ತಿದೆ ಆದ್ದರಿಂದ ಜನರು ಕಾಂಗ್ರೆಸ್, ಬಿಜೆಪಿ ಜೆಡಿಎಸ್ ಕಡೆಗಣಸಿ ಬಿಎಸ್ಪಿಗೆ ಬೆಂಬಲ ನೀಡುತ್ತಾರೆ ಎಂದರು. ಗಂಗಾಧರ್ ಬಹುಜನ ಮಾತನಾಡಿದರು. ಅಧ್ಯಕ್ಷ ಯೋಗೀಶ್, ಕುಮಾರ್ ಗೌರವ್ ಇದ್ದರು.