ಗೌಡರ ಸೋಲು ಕನಸಿನ ಮಾತು: ದ್ಯಾವೇಗೌಡ
ಹಾಸನ: ಕಾಂಗ್ರೆಸ್ ಮುಖಂಡರು ದೇವೇಗೌಡರನ್ನು ಸೋಲಿಸುವುದೇ ತಮ್ಮ ಗುರಿ ಎಂದು ಹೇಳುತ್ತಿದ್ದು, ಅದು ಕನಸಿನ ಮಾತು ತಾಲೂಕು ಜೆಡಿಎಸ್ ಅಧ್ಯಕ್ಷ ಹಾಗೂ ವಕೀಲ ಎಸ್. ದ್ಯಾವೇಗೌಡ ಹೇಳಿದರು. ಅಭಿವೃದ್ಧಿ ವಿಷಯ ಮಾತನಾಡುವುದನ್ನು ಬಿಟ್ಟು ಪದೇ ಪದೇ ಎಚ್.ಡಿ. ದೇವೇಗೌಡರ ಬಗ್ಗೆ ಯೇ ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ನವರಿಗೆ ಜಿಲ್ಲೆಯ ಅಭಿವೃದ್ಧಿಗಿಂತ ಎಚ್.ಡಿ.ದೇವೇಗೌಡರನ್ನು ಸೋಲಿಸುವುದೇ ಮುಖ್ಯ ಗುರಿಯಾಗಿರುವುದು ಅವರಲ್ಲಿನ ಅಸೂಯೆಯನ್ನು ಎತ್ತಿ ತೋರಿಸುತ್ತದೆ. ಅಲ್ಲದೇ, ದೇವೇಗೌಡರ ರಾಜಕೀಯ ಶಕ್ತಿಯ ಬಗ್ಗೆ ಕಾಂಗ್ರೆಸ್ನವರಲ್ಲಿ ನಡುಕ ಹುಟ್ಟಿಸಿರುವುದು ಗೋಚರವಾಗುತ್ತದೆ ಎಂದರು.