ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗೌಡರಿಗಿಂತ ಗೌಡತಿಯೇ ಶ್ರೀಮಂತೆ!

Rashmi Kasaragodu
Updated On : 26 Mar 2014, 12:55 pm

ಹಾಸನ:  ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗಿಂತ ಅವರ ಪತ್ನಿ ಚನ್ನಮ್ಮನವರೇ ಶ್ರೀಮಂತೆ. ಮಂಗಳವಾರ ನಾಮಪತ್ರದ ಜತೆ ಗೌಡರು ಸಲ್ಲಿಸಿರುವ ಆಸ್ತಿ ವಿವರದ ಪ್ರಕಾರ, ಗೌಡರು ರು. 52,76,532 ಚರಾಸ್ತಿ ಹೊಂದಿದ್ದರೆ, ಚನ್ನಮ್ಮ ರು. 67,30,904 ಮೌಲ್ಯದ ಆಸ್ತಿ ಹೊಂದಿದ್ದಾರೆ.
ದೇವೇಗೌಡರು ರು. 24,18,806 ಸ್ಥಿರಾಸ್ತಿ ಹೊಂದಿದ್ದರೆ, ಚನ್ನಮ್ಮನವರು ರು. 2,82, 95,000 ಹೊಂದಿದ್ದಾರೆ.  2012-13ರಲ್ಲಿ ದೇವೇಗೌಡರ ಸಾಮಾನ್ಯ ಆದಾಯ ರು. 6,23,950, ಕೃಷಿ ಆದಾಯ ರು. 2.30 ಲಕ್ಷ ರು. ಚನ್ನಮ್ಮನವರ ಸಾಮಾನ್ಯ ಆದಾಯ ರು. 50,297, ಕೃಷಿ ಆದಾಯ ರು. 1.80 ಲಕ್ಷ. ದೇವೇಗೌಡರ ಬಳಿ ರು. 1.83 ಲಕ್ಷ ನಗದು ಹಣ ಇದ್ದರೆ, ಚನ್ನಮ್ಮನವರ ಬಳಿ ರು. 8.15 ಲಕ್ಷ ಇದೆ.ಅವರು ರು. 4.40 ಲಕ್ಷ ಚಿನ್ನಾಭರಣ ಹೊಂದಿದ್ದಾರೆ. ದೇವೇಗೌಡ ದಂಪತಿಗೆ ರು. 11.22 ಲಕ್ಷ ಮೌಲ್ಯದ ಮೂರು ಅಂಬಾಸಿಡರ್ ಕಾರುಗಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement