ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪರೀಕ್ಷಾರ್ಥಿಗಳು ಮೂವರು ಸಿಬ್ಬಂದಿ ಮಾತ್ರ ಇಪ್ಪತ್ತಾರು!

Mainashree
Updated On : 25 Mar 2014, 11:11 am

ಅರಕಲಗೂಡು: ಪರೀಕ್ಷೆ ಬರೆದವರು ಮೂರೇ ಮಂದಿ. ಅವರಿಗಾಗಿ ಎರಡು ಕೇಂದ್ರಗಳು ಮತ್ತು 26 ಸಿಬ್ಬಂದಿ!
ಪಟ್ಟಣದಲ್ಲಿ ಎರಡು ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಗಳಿವೆ. ಮಂಗಳವಾರ ಉರ್ದು ಭಾಷಾ ಪರೀಕ್ಷೆ ಇತ್ತು. ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಏಕೈಕ ವಿದ್ಯಾರ್ಥಿನಿ ಪರೀಕ್ಷೆ ಬರೆದಳು. ಓರ್ವ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು, ಓರ್ವ ಕೊಠಡಿ ಮೇಲ್ವಿಚಾರಕರು, ಮೂವರು ಅಧಿಕಾರಿಗಳ ಕೇಂದ್ರ ತಪಾಸಣಾ ತಂಡ, ಒಬ್ಬರು ಉತ್ತರ ಪತ್ರಿಕೆ ಕಸ್ಟೋಡಿಯನ್, 4 ಜನರ ಸಂಚಾರಿ ಜಾಗೃತ ತಂಡ, ಓರ್ವ ಗುಮಾಸ್ತರು, ಇಬ್ಬರು ಡಿ. ದರ್ಜೆ ನೌಕರರು ಇಲ್ಲಿನ ಪರೀಕ್ಷೆ ನಡೆಸಿದರು. ಅದೇ ರೀತಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಬ್ಬರು ಪರೀಕ್ಷೆ ಬರೆದರು. ಇಲ್ಲಿಯೂ ಅದೇ ರೀತಿಯಲ್ಲಿ 13 ಮಂದಿ ಪರೀಕ್ಷಾ ಮೇಲ್ವಿಚಾರಕ ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಲಸ ನಿರ್ವಹಿಸಿದರು. ಒಬ್ಬಳೇ ವಿದ್ಯಾರ್ಥಿನಿ ಇದ್ದ ಕೇಂದ್ರಕ್ಕೂ ಸಂಚಾರಿ ಜಾಗೃತ ದಳ ಭೇಟಿ ನೀಡಿತ್ತು.
ಒಟ್ಟಾರೆಯಾಗಿ ಮಂಗಳವಾರದ ಉರ್ದು ಭಾಷಾ ಪರೀಕ್ಷೆ ಕೂಸಿಗಿಂತ ಕುಲಾವಿ ಭಾರ ಎಂಬ ಗಾದೆ ಮಾತು ನೆನಪಿಸುತ್ತಿತ್ತು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement