ಭಕ್ತಿಭಾವ ಸಂಗಮ
ಹೊಳೆನರಸೀಪುರ: ಪಟ್ಟಣದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವದ ಅಂಗವಾಗಿ ಭಕ್ತಿವರ್ಧನ ಪ್ರತಿಷ್ಠಾನ ದೇವಾಲಯ ಸಂಕ್ರಾಂತಿ ಮಂಟಪದಲ್ಲಿ ಆಯೋಜಿಸಿದ್ದ ಐದು ದಿನಗಳ ಕಾರ್ಯಕ್ರಮದಲ್ಲಿ ಇತ್ತೀಚೆಗೆ ವಿದ್ವಾನ್ ಆನೂರು ಅನಂತ ಕೃಷ್ಣಶರ್ಮ ಅವರ ನೇತೃತ್ವದಲ್ಲಿ ನಡೆದ ಭಕ್ತಿಭಾವ ಸಂಗಮ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಅಧಿಕಾರ ಹಂಚಿಕೆ
ಹಾಸನ: ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ನಾನಾ ಅಧಿಕಾರವನ್ನು ಕೊಟ್ಟಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಚನ್ನವೀರಪ್ಪ ಅವರು ತಿಳಿಸಿದ್ದಾರೆ. ದಿ. ಮುಖ್ಯಮಂತ್ರಿ ಡಿ. ದೇವರಾಜ್ ಅರಸ್ ಅವರ ನಂತರ ಅಧಿಕಾರ ವಿಕೇಂದ್ರೀಕರಣ ಮಾಡಿದ ಎಚ್.ಡಿ. ದೇವೇಗೌಡ ಅವರು ಸರ್ವಜಾತಿ ಜನಾಂಗದ ಪ್ರೀತಿ ಗಳಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸುವುದು ಅಗತ್ಯ ಎಂದಿದ್ದಾರೆ.
ಕವಿತೆಗಳಿಗೆ ಆಹ್ವಾನ
ಹಾಸನ: ಮನೆ ಮನೆ ಕವಿಗೋಷ್ಠಿಯು ಜಿಲ್ಲಾ ಸಾಹಿತ್ಯ ಸಂಘಟನೆ ಹಾಗೂ ಬೆಳವಣಿಗೆಯಲ್ಲಿ ತನ್ನದೇಯಾದ ಮಹತ್ತರ ಪಾತ್ರ ಹೊಂದಿದ್ದು, ಇದೀಗ 200 ಮಾಸಿಕ ಕಾರ್ಯಕ್ರಮಗಳ ಯಶಸ್ವಿ ಮೆಟ್ಟಿಲುಗಳನ್ನು ದಾಟಿರುವ ಸಂದರ್ಭದ ಸವಿನೆನಪಿಗಾಗಿ ಸಹಕಾರತತ್ವದಡಿಯಲ್ಲಿ ಪ್ರಾತಿನಿಧಿಕ ಕವನ ಸಂಕಲನವನ್ನು ಹೊರತರುವ ನಿರ್ಣಯವನ್ನು ಸರ್ವ ಸದಸ್ಯರ ಸಮ್ಮುಖದಲ್ಲಿ ಚರ್ಚಿಸಿ ತೀರ್ಮಾನಿಸಲಾಗಿದೆ. ಆದ್ದರಿಂದ ಜಿಲ್ಲೆಯ ಕವಿ- ಕವಯತ್ರಿಯರು 18ರಿಂದ 20 ಸಾಲುಗಳಿಗೆ ಮೀರದಂತೆ ತಮ್ಮ ಸ್ವ ರಚಿತ ಐದು ಕವಿತೆಗಳನ್ನು, ಸ್ವವರವನ್ನು ಹಾಗೂ ಇತ್ತೀಚಿನ ಎರಡು ಪಾಸ್ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಮಾ. 28ರೊಳಗೆ ಕಳುಹಿಸಲು ಕೋರಿದೆ. ಕವಿತೆಗಳು ಆಯ್ಕೆಯಾದಲ್ಲಿ ಪ್ರಕಟಣೆಯ ವಿವರಗಳನ್ನು ಪತ್ರ ಮುಖೇನ ತಿಳಿಸಲಾಗುವುದು. ಕವಿತೆಗಳನ್ನು ಕೊಟ್ರೇಶ್ ಎಸ್. ಉಪ್ಪಾರ್, ಸಂಚಾಲಕರು, ಮನೆಮನೆ ಕವಿಗೋಷ್ಠಿ, ಹಲಸಿನ ಮರದ ಹತ್ತಿರ, ತೇಜೂರು ರಸ್ತೆ, ಶಾಂತಿನಗರ, ಹಾಸನ. ಚಂದ್ರಕಾಂತ ಪಡೆಸೂರಭಾರತಿ ವಿದ್ಯಾ ಮಂದಿರ, ಹಾಸನ. ಇಲ್ಲಿಗೆ ಕಳುಹಿಸಬೇಕು.