ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮತದಾನ ಮಹತ್ವದ ಜವಾಬ್ದಾರಿ

Rashmi Kasaragodu
Updated On : 26 Mar 2014, 12:54 pm

ಜಾವಗಲ್: ಮಹತ್ವವಾದ ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರು ಚುನಾವಣೆಯಲ್ಲಿ ಮತದಾನ ಮಾಡುವುದು ಮಹತ್ವದ್ದಾಗಿದೆ ಎಂದು ತಾಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ಹಾಗೂ ಜಾವಗಲ್ ಹೋಬಳಿ ಚುನಾವಣಾ ಎಂಸಿಸಿ ಅಧಿಕಾರಿ ಚಂದ್ರಶೇಖರ್ ತಿಳಿಸಿದರು.
ಜಾವಗಲ್ ಹೋಬಳಿ ಪಿ.ಡಿ.ಓ, ಗ್ರಾಮಲೆಕ್ಕಿಗರು, ಕಾರ್ಯದಶಿಗಳು, ಬಿ.ಎಲ್.ಒ.ಗಳ ಸಭೆಯಲ್ಲಿ ಮಾತನಾಡಿ ಹಿಂದಿನ ಚುನಾವಣೆಗಳಲ್ಲಿ ಶೇಕಡಾವಾರು ಮತದಾನ ಕಡಿಮೆಯಾಗಿದ್ದು. ಈಗ ಶೇಕಡಾವಾರು ಮತದಾನ ಹೆಚ್ಚಿಸಲು ಜನರಲ್ಲಿ ಜಾಗೃತಿ ಮೂಡಿಸಲು ಜಾಥಾ ನಡೆಸಲಾಗುತ್ತಿದೆ ಎಂದರು.
ಪ್ರತಿಜ್ಞಾವಿಧಿ: ಜಾವಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಹ ಪ್ರಾಧ್ಯಾಪಕ ಬಿ. ಶಿವಕುಮಾರ್ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು.ಪ್ರಾಂಶುಪಾಲ ಡಾ. ಕೆ. ಭಾಷಾ ಮಾತನಾಡಿ, ಪ್ರಜಾಪ್ರಭುತ್ವ ಬಲಗೊಳಿಸುವ ಶಕ್ತಿ ಯುವಜನತೆಯಲ್ಲಿ ಅಧಿಕವಾಗಿದ್ದು, ಯುವಜನತೆ ಮತದಾನದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಬೇಕೆಂದರು. ಉಪ ತಹಸೀಲ್ದಾರ್ ಅಶೋಕ್, ಆರ್.ಐ. ಮುದ್ದುವೀರಯ್ಯ, ಬೋಧಕ ಸಿಬ್ಬಂದಿ, ಪಿಡಿಓ ವಿರೂಪಾಕ್ಷ, ರಾಜಶೇಖರ್ ಇದ್ದರು. ಕಾಲೇಜಿನ ವಿದ್ಯಾರ್ಥಿಗಳು, ಹೋಬಳಿಯ ಎಲ್ಲಾ ಬಿಎಲ್‌ಓಗಳು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಜಾಥಾ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement