23 ಅಭ್ಯರ್ಥಿಗಳಿಂದ 44 ನಾಮಪತ್ರ ಸಲ್ಲಿಕೆ
ಹಾಸನ: ಹದಿನಾಲ್ಕನೇ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮುಗಿದಿದ್ದು, ಜಿಲ್ಲೆಯಲ್ಲಿ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಸೇರಿದಂತೆ 23 ಮಂದಿಯಿಂದ 44 ನಾಮಪತ್ರಗಳು ಸಲ್ಲಿಕೆಯಾಗಿವೆ. ಆ ಪೈಕಿ 13 ಮಂದಿ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅಂಧರೊಬ್ಬರು ನಾಮಪತ್ರ ಸಲ್ಲಿದ್ದಾರೆ. ಚನ್ನರಾಯಪಟ್ಟಣ ಅಂಧರಾದ ಎಂ. ರಾಮಯ್ಯ ಎಂಬುವರು ನಾಮಪತ್ರ ಸಲ್ಲಿದ್ದಾರೆ.
ಯಾರ್ಯಾರ ನಾಮಪತ್ರ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (ಜೆಡಿಎಸ್), ಶಾಸಕ ಎ. ಮಂಜು (ಕಾಂಗ್ರೆಸ್), ಮಾಜಿ ಸಚಿವ ಸಿ.ಎಚ್. ವಿಜಯಶಂಕರ್ (ಬಿಜೆಪಿ), ಎ.ಪಿ. ಅಹಮದ್ ದಿಎಸ್‌ಪಿ, ಮೋಹನ್ ಸಂತೋಷ್ (ಅಮ್ ಆದ್ಮಿ), ಕೆ.ಆರ್. ಗಂಗಾಧರಪ್ಪ (ಲೋಕಸತ್ತಾ ಪಾರ್ಟಿ), ಬಿ.ಟಿ. ಗಿರೀಶ್ (ಹಿಂದೂಸ್ತಾನ್ ಜನತಾ ಪಾರ್ಟಿ), ಮಂಜುನಾಥ್ (ಭಾರತೀಯ ಬಿ.ಆರ್. ಅಂಬೇಡ್ಕರ್ ಜನತಾ ಪಾರ್ಟಿ, ಬಿಎಜೆಪಿ), ರುದ್ರೇಗೌಡ (ಜೈ ವಿಜಯಭಾರತಿ ಪಾರ್ಟಿ), ಎಚ್.ಡಿ. ರೇವಣ್ಣ (ಕರುನಾಡು ಪಾರ್ಟಿ), ಟಿ.ಜೆ. ಅಬ್ರಾಹಂ, ಎಚ್.ಟಿ. ಉಷಾ, ಎಂ. ಮಹೇಶ, ಕೆಂಪಯ್ಯ, ಟಿ.ಡಿ. ಜಗದೀಶ್, ಪುಟ್ಟಯ್ಯ, ಜವರಯ್ಯ, ಡಾ.ಕೆ. ಭಾನುಪ್ರಕಾಶ್, ಎಸ್.ಎನ್. ಮಲ್ಲಪ್ಪ, ಎಸ್. ಬಿ. ರಾಜೇಗೌಡ, ಎಂ. ರಾಮಯ್ಯ, ಶಿವಾನಂದ, ಹೊ.ತಿ. ಹುಚ್ಚಪ್ಪ (ಎಲ್ಲರೂ ಪಕ್ಷೇತರರು).