ಅಕ್ರಮ ಮದ್ಯ, ನಗದು ವಶ
ಜಾವಗಲ್: ಜಾವಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿ ರು. 4255 ಮೊತ್ತದ ಮದ್ಯ ಹಾಗೂ ರು. 8670 ನಗದು ವಶಪಡಿಸಿಕೊಂಡಿರುವ ಘಟನೆ ನಡೆದಿದೆ. ಸೋಮವಾರ ನಡೆದಿದೆ. ಜಾವಗಲ್ ಹೋಬಳಿ ನೇರ್ಲಿಗೆ ಗ್ರಾಮದಲ್ಲಿನ ಗಂಗಣ್ಣನವರ ಮನೆಯ ಮುಂದೆ ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಹಿತಿ ಮೇರೆಗೆ ಠಾಣಾಕಾರಿ ಸಿ.ಪಿ. ನವೀನ್, ಎ.ಎಸ್.ಐ ತಿಮ್ಮೇಗೌಡ, ಸಿಬ್ಬಂದಿ ಪುಟ್ಟಸ್ವಾಮಿ, ಜೀವನ್ ಕುಮಾರ್ ನೇರ್ಲಿಗೆ ಗ್ರಾಮದ ವಿನೋದ್ ಎಂಬಾತನನ್ನು ಬಂಧಿಸಿದ್ದಾರೆ. ಪರವಾನಗಿ ಇಲ್ಲದೇ 1000 ಎಂ.ಎಲ್‌ನ 6 ನಾಕ್‌ಔಟ್ ಬಿಯರ್, 330 ಎಂ.ಎಲ್‌ನ 16 ನಾಕ್‌ಔಟ್ ಬಿಯರ್, 180 ಎಂಎಲ್ 15 ಒಟಿ, 90 ಎಂಎಲ್‌ನ 35 ರಾಜಾವಿಸ್ಕಿ, 90 ಎಂಎಲ್‌ನ 30 ಎಂಸಿಬಿ, ಸ್ಯಾಚೆಟ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.