ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಅಭಿವೃದ್ಧಿಗೆ ಅಟಲ್ ಬುನಾದಿ'

Rashmi Kasaragodu
Updated On : 27 Mar 2014, 12:04 pm

ಹಾರನಹಳ್ಳಿ: ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಪ್ರಧಾನಿಯಾಗಿದ್ದಾಗ ದೇಶದ ಅಭಿವೃದ್ಧಿಗೆ ದೇಶದ ಭದ್ರತೆಗೆ ಬುನಾದಿ ಹಾಕಿದ್ದರು ಎಂದು ಹಾಸನ ಲೋಕಸಭಾ ಬಿಜೆಪಿ ಅಭ್ಯರ್ಥಿವಿಜಯಶಂಕರ್ ನೆನಪಿಸಿಕೊಂಡರು.
ಇತ್ತೀಚೆಗೆ ಹಾರನಹಳ್ಳಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಹಾಹಾಕಾರ ಪರಿಸ್ಥಿತಿ: ಗಂಗಾ ಕಾವೇರಿ ನದಿ ಜೋಡಣೆ ಯೋಜನೆ ಜಾರಿಗೊಳಿಸುವ ಮಹಾನ್ ಕನಸನ್ನು ಅಟಲ್ ಜೀ ಕಂಡಿದ್ದರು. ನಂತರ 2004ರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಬಹುಮತ ಸಿಗಲಿಲ್ಲ. ನಂತರ ಯುಪಿಎ ಸರ್ಕಾರ ಆಡಳಿತ ನಡೆಸಿತು.  ಎನ್‌ಡಿಎ ಸರ್ಕಾರದ ಪ್ರಮುಖ ಯೋಜನೆ ಕಲ್ಪಿಸಲು ನಿರಾಸಕ್ತಿ ತೋರಿಸಿದ್ದರಿಂದ ಇಂದು ನೀರಿನ ಸಮಸ್ಯೆಗಳು, ಕುಡಿಯುವ ನೀರಿಗೂ ಹಾಹಾಕಾರ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರು.
ಕೋರಿಕೆ: ಯುಪಿಎ ಸರ್ಕಾರ ಹಗರಣದಲ್ಲಿಯೇ ನೆಲಕಚ್ಚುವ ಸ್ಥಿತಿ ಒದಗಿಬಂದಿದೆ ಎಂದ ಅವರು, ಶಾಶ್ವತ ಜನಪರ ಯೋಜನೆಗಳ ಬಗ್ಗೆ ಕಾಳಜಿ ಇಲ್ಲ. ದೇಶದಲ್ಲಿ ಬಿಜೆಪಿ ಪರ ಅಲೆ ಹೆಚ್ಚಾಗಿದ್ದು ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ಬಿಜೆಪಿಗೆ ಮತದಾರರು ಬೆಂಬಲಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಹಾರನಹಳ್ಳಿ ಸಿದ್ದಪ್ಪ, ಎನ್.ಡಿ. ಪ್ರಸಾದ್, ನವಿಲೆ ಅಣ್ಣಪ್ಪ, ಡಿ.ಬಿ. ಗಂಗಾಧರ್, ಹಿರಿಯಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement