ಉನ್ನತಿ, ಅವನತಿಗೆ ಹೆಣ್ಣೇ ಕಾರಣ: ರೇಣುಕಾ ಪ್ರಭು
ಹಾಸನ: ಹೆಣ್ಣು ಬೆಳಕಾಗಿ ಜ್ಯೋತಿಯಂತೆ ಪ್ರಜ್ವಲಿಸಲೂ ಬಲ್ಲಳೂ ಹಾಗೂ ಕಿಡಿಯಾಗಿ ನಾಶಕ್ಕೂ ಕಾರಣಳಾಗಬಲ್ಲಳು ಎಂದು ಕವಯತ್ರಿ ರೇಣುಕಾಪ್ರಭು ವಿಮರ್ಶಿಸಿದ್ದಾರೆ.
ಇಲ್ಲಿನ ಶಾಂತಿನಗರದ ಪ್ರಕೃತಿ ಮಹಿಳಾ ಸಂಘದ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಣ್ಣನ್ನು ಗೌರವಿಸುವುದು ಸಮಾಜದ ಹಾಗೂ ಕುಟುಂಬದ ಕರ್ತವ್ಯವಾಗಿದೆ ಎಂದು ತಾವು ಹೆಣ್ಣನ್ನು ಕುರಿತು ಬರೆದಿರುವ ಎರಡೂ ಕವನಗಳನ್ನು ಸ್ಮರಿಸಿದರು.
ಅತ್ತೆ, ಸೊಸೆ ಒಂದಾಗಬೇಕು: ಮೃತವೂ ಹೆಚ್ಚು ಸೇವಿಸಿದರೆ ವಿಷವಾಗುತ್ತದೆ ಎಂದು ಮಾರ್ಮಿಕವಾಗಿ ಎಚ್ಚರಿಸಿದ ಅವರು, ವಿವಾಹವೆಂಬುದು ಒಂದು ಮರದ ತೊಗಟೆಯನ್ನು ಇನ್ನೊಂದು ಮರಕ್ಕೆ ಕಸಿ ಮಾಡಿ ಸೇರಿಸುವ ಕೆಲಸದಂತೆ. ಅದು ಅಷ್ಟು ಸುಲಭವಾದ ಸಂಗತಿಯಲ್ಲ. ಕುಟುಂಬವೆಂದರೆ ಸಮಸ್ಯೆಗಳು ಬರುವುದು ಸಹಜ. ಅತ್ತೆ, ಸೊಸೆ ಒಂದಾದರೆ ಮನೆಯನ್ನು ಭದ್ರವಾಗಿ ಕಟ್ಟಲು ಸಾಧ್ಯ ಎಂದು ಹೇಳಿದರು.
ಸಾಮರಸ್ಯ ಅಗತ್ಯ: ಮನೆತನ ಮುಂದುವರಿಸುವುದು ವೈವಾಹಿಕ ಸಂಬಂಧದ ಮೂಲ ಉದ್ದೇಶವಾಗಿದ್ದು, ಹೊಂದಾಣಿಕೆ ತುಂಬಾ ಮುಖ್ಯ. ಸಾಮರಸ್ಯ ಅಗತ್ಯ ಎಂದು ತಿಳಿ ಹೇಳಿದರು.
ಕಿವಿಮಾತು: ಅಕ್ಕಯ್ಯಮ್ಮ ಸುಬ್ಬೇಗೌಡ ಮಾತನಾಡಿ, ಹೆಣ್ಣು ಅಂತರಂಗದ ಬಂಧನ ಕಳಚಿ ಕೊಳ್ಳಬೇಕಿದೆ. ಹೆಣ್ಣು ಆಬಲೆಯಲ್ಲ, ಸಬಲೆ ಎಂಬುದನ್ನು ತೋರಿಸಿಕೊಡಬೇಕಿದೆ ಎಂದು ಕಿವಿಮಾತು ಹೇಳಿದರು. ಕೆಂಪುಚೆಲುವಾಜಮ್ಮಣ್ಣಿ ಮಹಿಳಾ ಸಮಾಜದ ಪ್ರಧಾನ ಕಾರ್ಯದರ್ಶಿ ಲೀಲಾವತಿ ಆಧ್ಯಕ್ಷತೆ ವಹಿಸಿದ್ದರು. ಸಮಾಜದ ಅಧ್ಯಕ್ಷೆ ಪ್ರೇಮ ಬೋರೇಗೌಡ ನಿರೂಪಿಸಿ, ಸಮಾಜದ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಗೀತ ಮಂಜುಳ, ಪ್ರೇಮ ಪ್ರಾರ್ಥಿ ಸಿದರು. ಸಾವಿತ್ರಮ್ಮ ಹನುಮಂತೇ ಗೌಡ ಸ್ವಾಗತಿಸಿದರು. ಸವಿತಾ ವಾಸುದೇ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.