'ಕ್ರಮಬದ್ಧ ಅಧ್ಯಯನ ಯಶಸ್ಸಿಗೆ ಮೆಟ್ಟಿಲು'
ಹಾಸನ: ವಿದ್ಯಾರ್ಥಿಗಳ ಸಕಾರಾತ್ಮಕ ಚಿಂತನೆ ಹಾಗೂ ಕ್ರಮಬದ್ಧ ಅಧ್ಯಯನವು ಪರೀಕ್ಷೆಗಳಲ್ಲಿ ಮತ್ತು ಜೀವನದಲ್ಲಿ ಯಶಸ್ಸಿಗೆ ಮೆಟ್ಟಿಲು ಎಂದು ಹರಿಹರಪುರ ಶ್ರೀಧರ್ ತಿಳಿಸಿದರು.
ಅವರು ನಗರದ ಸಹ್ಯಾದ್ರಿ ವೃತ್ತದಲ್ಲಿರುವ ಎಸ್.ಎಸ್. ಅಕಾಡೆಮಿ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಿದ್ಧತೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕೀಳರಿಮೆ ಹಾಗೂ ಮೊಬೈಲ್ಗಳ ಸಹವಾಸದಿಂದ ವಿದ್ಯಾರ್ಥಿಗಳು ದೂರವಿರಬೇಕು ತಿಳಿಹೇಳಿದರು. ಇದೇ ಸಂದರ್ಭದಲ್ಲಿ ಸ್ಪಂದನಾ ವೇದಿಕೆಯ ಅಧ್ಯಕ್ಷೆ ಕಲಾವತಿ ಮದುಸೂಧನ್ ಅವರನ್ನು ಅಕಾಡೆಮಿ ಅಧ್ಯಕ್ಷ ಪ್ರೊ. ಜಯರಾಂ ಸನ್ಮಾನಿಸಿದರು.
ಹರೀಶ್ ಸ್ವಾಗತಿಸಿದರು. ನಿಶಾ ವಂದಿಸಿದರು.