ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಂಜು ಆಸ್ತಿ ರು. 1 ಕೋಟಿ!

Rashmi Kasaragodu
Updated On : 27 Mar 2014, 12:06 pm

ಹಾಸನ: ಹಾಸನ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎ.ಮಂಜು ಅವರು  ಬುಧವಾರ ನಾಮಪತ್ರ ಸಲ್ಲಿಸಿರುವ ಜತೆಯಲ್ಲಿ  ಆಸ್ತಿ ವಿವರವನ್ನು ಸಲ್ಲಿಸಿದ್ದು, ಇದರ ಪ್ರಮುಖಾಂಶ ಇಂತಿದೆ.
ಶಾಸಕ ಎ. ಮಂಜು ಅವರು 1,37,01,992 ರು. ಚರಾಸ್ತಿ ಹೊಂದಿದ್ದರೆ, ಅವರ ಪತ್ನಿ ತಾರಾಮಂಜು  51,23,022 ರು. ಚರಾಸ್ತಿ ಹೊಂದಿದ್ದಾರೆ.
ಮಂಜು ಅವರು 5,59,26,660 ರು. ಸ್ಥಿರಾಸ್ತಿ ಹೊಂದಿದ್ದರೆ, ಪತ್ನಿ ಹೆಸರಿನಲ್ಲಿ  25.50 ಲಕ್ಷ ರು.  ಸ್ಥಿರಾಸ್ತಿ  ಹೊಂದಿದ್ದಾರೆ.
ಮಂಜು ಅವರ ಕೈಯಲ್ಲಿ 10 ಲಕ್ಷ ರು. ನಗದು ಹಣವಿದ್ದರೆ, ಪತ್ನಿಯ ಬಳಿ 5 ಲಕ್ಷ ರು. ನಗದು ಹಣವಿದೆ.
ಮಂಜು ಅವರ  ಬಳಿ 4.50 ಲಕ್ಷ ರು. ಮೌಲ್ಯದ 150 ಗ್ರಾಂ ಚಿನ್ನಾಭರಣ ಹೊಂದಿದ್ದರೆ,  ಪತ್ನಿ ತಾರಾ ಅವರು 18 ಲಕ್ಷ ರು. ಮೌಲ್ಯದ 500 ಗ್ರಾಂ ಚಿನ್ನಾಭರಣ ಹೊಂದಿದ್ದಾರೆ.
ಮಂಜು ಅವರು 1 ಲಕ್ಷ ರು. ಮೌಲ್ಯದ 2 ಕೆಜಿ ಬೆಳ್ಳಿ ವಸ್ತುಗಳನ್ನು ಹೊಂದಿದ್ದರೆ, ಪತ್ನಿ ತಾರಾ ಅವರು 75 ಸಾವಿರ ರು. ಮೌಲ್ಯದ 1.50 ಕೆಜಿ ಬೆಳ್ಳಿ ವಸ್ತುಗಳನ್ನು  ಹೊಂದಿದ್ದಾರೆ.
ಎ.ಮಂಜು ಅವರು ಎಂ. ಜಗದೀಶ ಎಂಬವರಿಗೆ 50 ಲಕ್ಷ ರು. ಸಾಲ ನೀಡಿದ್ದಾರೆ.
ಮಂಜು ಅವರು1 ಲಕ್ಷ ಮೌಲ್ಯದ ಮಾರುತಿ ಓಮ್ನಿ, 1.50ಲಕ್ಷ ರು. ಮೌಲ್ಯದ ಟ್ರ್ಯಾಕ್ಟರ್ ಮತ್ತು ಟ್ರೈಲರ್, 20 ಸಾವಿರ ರು. ಮೌಲ್ಯದ ಹೀರೋ ಹೊಂಡಾ ಬೈಕ್, 17 ಲಕ್ಷ ರು. ಮೌಲ್ಯದ ಟೋಯೋಟಾ ಇನ್ನೋವಾ ವಾಹನವನ್ನು ಹೊಂದಿದ್ದರೆ, ಪತ್ನಿ ತಾರಾ ಅವರ ಹೆಸರಿನಲ್ಲಿ 85,834 ರು. ಮೌಲ್ಯದ ಐಕಾನ್ ಕಾರ್ ಇದೆ.
ಮಂಜು ಅವರು ಬ್ಯಾಂಕಿನಲ್ಲಿ 11,31,588 ಸಾಲ ಉಳಿಸಿಕೊಂಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement