ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮತದಾನ ಜಾಗೃತಿ ಕಾರ್ಯಕ್ರಮ

Rashmi Kasaragodu
Updated On : 27 Mar 2014, 12:04 pm

ಹಾಸನ: ಪ್ರತಿಯೊಬ್ಬ ವ್ಯಕ್ತಿಯು ಮತದಾನದಲ್ಲಿ ಪಾಲ್ಗೊಳ್ಳಬೇಕೆಂದು ನಗರಸಭೆ ಆಯುಕ್ತ  ಕೃಷ್ಣಮೂರ್ತಿ  ತಿಳಿಸಿದರು.
ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿಯು ನಗರದ ಎನ್.ಡಿ.ಆರ್.ಕೆ. ಪ್ರಥಮ ದರ್ಜೆಕಾಲೇಜಿನ ಆವರಣದಲ್ಲಿ ಇತ್ತೀಚೆಗೆ  ಮತದಾರರ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,  ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಅರ್ಹ ಮತದಾರರು ತಮ್ಮ ಮತದಾನ ಮಾಡುವ ಹಕ್ಕನ್ನು ಪಡೆದುಕೊಂಡಿರುವುದರಿಂದ ತಪ್ಪದೆ ಮತದಾನದ ದಿನ ತಮ್ಮ ಮತವನ್ನು ಚಲಾಯಿಸಲು ಮುಂದಾಗಬೇಕು ಎಂದು ಹೇಳಿದರು.
ತಾಪಂ  ಕಾರ್ಯನಿರ್ವಾಹಕಾಧಿಕಾರಿ ಎನ್.ವಿ. ಶಿವಪ್ಪ ಮಾತನಾಡಿ,  ವಿದ್ಯಾರ್ಥಿಗಳು ನೆರೆಹೊರೆ ಹಾಗೂ ಪರಿಚಯಸ್ಥರನ್ನು ಮತದಾನದಲ್ಲಿ ಭಾಗವಹಿಸುವಂತೆ ಪ್ರೇರೆಪಿಸಬೇಕೆಂದು ಹಾಗೂ ಹೆಚ್ಚು ಹೆಚ್ಚು ಮತದಾರರು ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳುವಂತೆ ವಿದ್ಯಾರ್ಥಿಗಳು ಮಾಡಬೇಕೆಂದರು.
ಮತದಾರರ ಜಾಗೃತಿ ಜಾಥದಲ್ಲಿ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಹಾಗೂ ಹಿರಿಯ ಸಹಾಯಕ ನಿರ್ದೇಶಕ  ವಿನೋದಚಂದ್ರ, ತಾಲೂಕು ನೋಡಲ್ ಅಧಿಕಾರಿ ಟಿ. ಶಿವಣ್ಣ, ಜಿಲ್ಲಾ ಸ್ವೀಪ್ಸ್‌ದಸ್ಯ  ಕೃಷ್ಣಪ್ಪ, ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿಗಳಾದ ಎಚ್. ಕೆ. ಜಯರಾಮ್, ಎಚ್. ಎಸ್. ನಿಂಗಪ್ಪ, ಹಿರಿಯ ಉಪನ್ಯಾಸಕ  ಎಂ.ಎಸ್. ಕೂಗೇಗೌಡ,  ಕೇಂದ್ರ ಕ್ಷೇತ್ರ ಪ್ರಚಾರ ಇಲಾಖೆಯ ಕ್ಷೇತ್ರ ಪ್ರಚಾರ ಸಹಾಯಕ ಪ್ರಕಾಶ್, ಕಾಲೇಜಿನ ಉಪನ್ಯಾಸಕರು, ನಗರಸಭೆಯ ಸಿಬ್ಬಂದಿ ವರ್ಗದವರು, ಹಿರಿಯ ನಾಗರಿಕ ಉಮಾಪತಿ ಮೊದಲಿಯಾರ್ ಇತರರು ಇದ್ದರು.
 ಜಾಗೃತಿ ಜಾಥಾವು ಎನ್.ಡಿ.ಆರ್.ಕೆ. ಕಾಲೇಜಿನ ಆವರಣದಿಂದ ಹೊರಟು ಕುವೆಂಪುನಗರ, ಆಡುವಳ್ಳಿ ಹಾಗೂ ಉದಯಗಿರಿ ಬಡಾವಣೆಗಳಲ್ಲಿ ಕರಪತ್ರ ಹಂಚುವಿಕೆ, ಘೋಷಣೆಗಳ ಮೂಲಕ ಮತದಾರರಿಗೆ ಜಾಗೃತಿಯನ್ನು ಹಾಗೂ ಮತದಾನ ಮಾಡುವಂತೆ ಪ್ರೇರೇಪಿಸಲಾಯಿತು.      
ಕಡವಿನ ಹೊಸಳ್ಳಿ ಗ್ರಾಮದಲ್ಲಿ: ಹಾಸನ ತಾಲೂಕಿನ  ಕಡವಿನ ಹೊಸಳ್ಳಿ ಗ್ರಾಮದಲ್ಲಿಯೂ ಇತ್ತೀಚೆಗೆ  ಮತದಾನದಲ್ಲಿ ಸರ್ವರ ಪಾಲ್ಗೊಳ್ಳುವಿಕೆಯ ಅರಿವು ಮೂಡಿಸುವ ಜಾಥ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.  ರಾಷ್ಟ್ರೀಯ ಸೇವಾ ಯೋಜನಾಧಿಕಾರಿ   ಮಧುಸೂದನ್ ಕಡ್ಡಾಯ ಮತದಾನದ ಪ್ರಾಮುಖ್ಯತೆಯನ್ನು ವಿವರಿಸಿದರಲ್ಲದೆ ಮತದಾನ ಪ್ರಕ್ರಿಯೆಯಲ್ಲಿ ಸರ್ವರೂ ಪಾಲ್ಗೊಳ್ಳುವಂತೆ ವಿನಂತಿಸಿದರು. ಕಡವಿನ ಹೊಸಳ್ಳಿ ಗ್ರಾಮದಲ್ಲಿ ಕಡ್‌ಡಾಯ ಮತದಾನ ನಮ್ಮ ಹಕ್ಕು ಎಂಬ ಘೋಷಣೆಗಳೊಂದಿಗೆ ಜಾಥಾ ನಡೆಯಿತು. ಕರ ಪತ್ರಗಳನ್ನು ಮನೆ ಮನೆಗೆ ಹಂಚಲಾಯಿತು. ಕಾಲೇಜಿನ ವಿದ್ಯಾಥಿಗಳು ಈ ಜಾಥಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement