'ಲೋಕ' ಕಣಕ್ಕೆ ದಲಿತ ಸಂಘರ್ಷ ಸಮಿತಿ
ಹಾಸನ: ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಿಂದ ಸ್ಪರ್ಧಿಸಿರುವುದಾಗಿ ಸಮಿತಿಯ ಸಂಘಟನೆ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಚಳುವಳಿಯು ತನ್ನ 40 ವರ್ಷಗಳ ನಡೆಯ ನಂತರ, ತನ್ನದೇ ಪಕ್ಷ ಕಟ್ಟಿ ಮುಂದಿನ ಚುನಾವಣೆ ಎದುರಿಸುವ ಗುರಿ ಹೊಂದಿರುವುದಾಗಿ ಹೇಳಿದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಮಿತಿಯಿಂದ ಹಾಸನ, ಉಡುಪಿ, ಚಿಕ್ಕಮಗಳೂರು, ಚಿಕ್ಕಬಳ್ಳಪುರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಕದಸಂಸ ಜಿಲ್ಲಾ ಸಂಚಾಲಕ ಮಂಜುನಾಥ್, ರಾಜ್ಯ ಸಂಘಟನಾ ಸಂಚಾಲಕಎಸ್.ಎನ್. ಮಲ್ಲಪ್ಪ, ಎಚ್.ಆರ್. ನಾಗೇಂದ್ರ, ಎ.ಎಲ್. ಭಾಸ್ಕರ್ ಇದ್ದರು.