ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವೈದ್ಯರ ಮೇಲೆ ಹಲ್ಲೆ: ಇಬ್ಬರ ಬಂಧನ

Rashmi Kasaragodu
Updated On : 27 Mar 2014, 12:06 pm

ಅರಕಲಗೂಡು: ಕರ್ತವ್ಯದ ಮೇಲಿದ್ದ ವೈದ್ಯಯೊಬ್ಬರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಪೊಲೀಸರು ಬಂಧಿಸಿದ್ದು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಗುರುವಾರ ಬೆಳಿಗ್ಗೆ ಸುಮಾರು 11 ಗಂಟೆ ಸಮಯದಲ್ಲಿ ಕ್ಯಾನ್ಸರ್ ರೋಗಿಯೊಬ್ಬರಿಗೆ ತುರ್ತು  ಚಿಕಿತ್ಸೆ ನೀಡುತ್ತಿದ್ದಾಗ, ತಮ್ಮ ಸಂಬಂಧಿಕರಿಗೂ ಚಿಕಿತ್ಸೆ ನೀಡುವಂತೆ ಬಂದ ಇಬ್ಬರು ವ್ಯಕ್ತಿಗಳು ವೈದ್ಯರ ಬಳಿ ಹಠ ಮಾಡಿದ್ದಾರೆ.
ಬೇರೊಬ್ಬ ರೋಗಿಯ ತಪಾಸಣೆಯಲ್ಲಿ ನಿರತರಾಗಿದ್ದ ವೈದ್ಯರು ಇವರ ಕಡೆಯ ರೋಗಿಗೆ ಗಮನ ಕೊಡಲು ಕೊಂಚ ವಿಳಂಬ ಮಾಡಿದ್ದಾರೆ. ಇದೇ ಕಾರಣಕ್ಕಾಗಿ ವೈದ್ಯ ಡಾ.ರೇವಣ್ಣ ಅವರ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ. ಜೊತೆಗೆ, ಆ ಸಂದರ್ಭದಲ್ಲಿದ್ದ ಇತರ ಸಿಬ್ಬಂದಿಗಳ ಮೇಲೂ ಹಲ್ಲೆ ನಡೆಸಿದ್ದಾರೆ.
ಆಗ, ಸ್ಥಳದಲ್ಲೇ ಇದ್ದ ಇತರೆ ಸಾರ್ವಜನಿಕರು ವೈದ್ಯರ ಮೇಲಿನ ಹಲ್ಲೆ ಬಗೆಗೆ ಪ್ರಶ್ನಿಸಿದಾಗ ಅವರ ಮೇಲೂ ಹರಿಹಾಯ್ದ ಆರೋಪಿಗಳು ಅನುಚಿತವಾಗಿ ವರ್ತಿಸಿದರೆಂದು ಆರೋಪಿಸಲಾಗಿದೆ.
ಈ ಸಂಬಂಧ ವೈದ್ಯರು ಅರಕಲಗೂಡು ಪೊಲೀಸರಿಗೆ ದೂರು ನೀಡಿದ್ದು, ಕೂಡಲೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಅರಕಲಗೂಡು ತಾಲೂಕಿನ ತೇಜೂರು ಗ್ರಾಮದ ಪ್ರವೀಣ್ ಮತ್ತು ನವೀನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement