ಉಚಿತ ತರಬೇತಿ
ಹಾಸನ: ಕರ್ನಾಟಕ ಎಜುಕೇಷನ್ ಅಕಾಡೆಮಿ ಸಂಸ್ಥೆ ವತಿಯಿಂದ ಏ. 7ರಿಂದ ನಗರದ ಈಡಿಗರ ಭವನದಲ್ಲಿ ಉಚಿತ ಇಂಗ್ಲೀಷ್ ಶಿಕ್ಷಣ ಹಾಗೂ ಉದ್ಯೋಗಕ್ಕೆ ಬೇಕಾದಂತಹ ತರಬೇತಿ ನೀಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ರಾಕೇಶ್ ಹೆತ್ತೂರ್ ತಿಳಿಸಿದ್ದಾರೆ. ೊ
ತರಬೇತಿಯಲ್ಲಿ ಪಾಲ್ಗೊಳ್ಳುವ ಆಸಕ್ತರು ಸಂಸ್ಥೆಯ ದೂರವಾಣಿ 08172263232, ಅಥವಾ ಇಮೇಲ್ ್ಞಜಛ್ಛಛಜಜಟಣಅ್ಜಟಛ್ಝಟ.್ಛ್ಟಟಗೆ ಸಂಪರ್ಕಿಸುವಂತೆ ಕೋರಲಾಗಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯ ಶಶಿಕುಮಾರ್, ತರಬೇತುದಾರ ಪ್ರಸಾದ್ ಇದ್ದರು.
ಶತಮಾನೋತ್ಸವ
ಆಲೂರು: ಪಟ್ಟಣದ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಾರಂಭವಾಗಿ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಶತಮಾನೋತ್ಸವ ಕಾರ್ಯಕ್ರಮವನ್ನು ಮಾ. 28ರಂದು ಶುಕ್ರವಾರ ಬೆಳಗ್ಗೆ 10.30ಕ್ಕೆ ನಡೆಯಲಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವ ಕಾರಣ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ನಡೆಸಲು ನಿಶ್ಚಯಿಸಿದ್ದಾರೆ. ಆದರೆ, ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಅದ್ದೂರಿ ಶತಮಾನೋತ್ಸವ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಚುನಾವಣೆ ಕಳೆದ ನಂತರ ಒಂದು ದಿನಾಂಕ ನಿಗದಿಗೊಳಿಸಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ.