ಕುಡಿಯುವ ನೀರಿನ ಬಾವಿಗೆ ಚರಂಡಿ ನೀರು
ಸಕಲೇಶಪುರ: ಪಟ್ಟಣದ ಅಂಬೇಡ್ಕರ್ ಭವನದ ರಸ್ತೆಯಲ್ಲಿರುವ ಕುಡಿಯುವ ನೀರಿನ ಬಾವಿಗೆ ಚರಂಡಿ ನೀರು ಬೀಡುತ್ತಿರುವ ಪರಿಣಾಮ ಕುಡಿಯುವ ನೀರಿಗೆ ತೊಂದರೆ ಎದುರಾಗಿದೆ ಎಂದು ಮೇಲಿನ ಕೊಪ್ಪಲು ನಿವಾಸಿಗಳು ದೂರಿದ್ದಾರೆ. ತಲಾತಲಾಂತರದಿಂದ ಮೇಲಿನ ಕೊಪ್ಪಲಿನ ಚರಂಡಿ ನೀರು ಅಂಬೇಡ್ಕರ್ ಭವನದ ರಸ್ತೆಯಲ್ಲಿ ಹರಿದು ಹೇಮಾವತಿ ನದಿ ಸೇರುತ್ತಿತ್ತು. ಆದರೆ ಈ ರಸ್ತೆಯಲ್ಲಿ ಚರಂಡಿ ನಿರ್ಮಾಣ ಮಾಡುವ ಉದ್ದೇಶದಿಂದ ರಸ್ತೆಯನ್ನು ತುಂಡರಿಸಿ ಇತಿಹಾಸವಿರುವ ಕುಡಿಯುವ ನೀರಿನ ಬಾವಿಗೆ ಬೀಡಲಾಗಿದೆ. ಇದರಿಂದ ಕಲುಷಿತ ನೀರು ಬಾವಿ ಸೇರುತ್ತಿದ್ದು ಈ ಬಾವಿಯನ್ನೇ ಆಶ್ರಯಿಸಿದ್ದ ನೂರಾರು ಕುಟುಂಬಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ.
ಆದ್ದರಿಂದ ಶೀಘ್ರವೇ ಬಾವಿಗೆ ಬೀಡಲಾಗಿರುವ ಚರಂಡಿ ನೀರನ್ನು ಬೇರೆಡೆ ಹರಿಸಬೇಕು ಹಾಗೂ ಬಾವಿಯನ್ನು ಶುದ್ಧೀಕರಿಸಿಕೊಡಬೇಕು. ತಪ್ಪಿದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.