ಬೆಂಕಿ ಆಕಸ್ಮಿಕ: ಭಸ್ಮವಾದ ಹೊಟೇಲ್ ಸಾಮಗ್ರಿಗಳು
ಜಾವಗಲ್: ಹೊಟೇಲ್ ಒಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಹೊಟೇಲ್ ಸಾಮಗ್ರಿಗಳು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಜಾವಗಲ್ನಲ್ಲಿ ನಡೆದಿದೆ.
ಜನತಾ ಬಡಾವಣೆಯಲ್ಲಿ ಇರುವ ಜೆ.ಎಸ್. ರಾಜು ಎಂಬುವರ ನಿವೇಶನದಲ್ಲಿ ಹೊಟೇಲ್ ನಡೆಸಲು ಶೆಡ್ ಕಟ್ಟಿದ್ದು, ಶೆಡ್ನೊಳಗೆ ಹೊಟೇಲ್ ಸಾಮಗ್ರಿಗಳಾದ 10 ಪ್ಲಾಸ್ಟಿಕ್ ಡ್ರಮ್, ಮೇಜು, ಕುರ್ಚಿ, ಟೇಬಲ್, ಗ್ಯಾಸ್ ಸ್ಟೌವ್ಗಳು, ಪಾತ್ರೆಗಳು, ಮತ್ತು ಮೇಲ್ಚಾವಣೆಗೆ ಹಾಕಿದ್ದ 50 ಜಿಂಕ್ಶೀಟ್ಗಳು ಬೆಂಕಿ ಕೆನ್ನಾಲಿಗೆಗೆ ತುತ್ತಾಗಿವೆ.
ಜೋಡಿಸಲಾಗಿದ್ದ ಎಲ್ಲಾ ಸಾಮಾನುಗಳು ಸುಟ್ಟು ನಾಶವಾಗಿವೆ. ಸ್ಥಳಕ್ಕೆ ಆಗ್ನಿಶಾಮಕ ದಳವನ್ನು ಕರೆಸಲಾಗಿತ್ತು. ಸುಮಾರು 2 ಲಕ್ಷ ರು. ನಷ್ಟ ಸಂಭವಿಸಿದೆ ಎಂದು ಮಾಲೀಕ ರಾಜು ಜಾವಗಲ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರ್ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.