ಬೈಕ್ ಅಪಘಾತ ವ್ಯಕ್ತಿ ಸಾವು
ಆಲೂರು: ಬೈಕ್ಗೆ ಬೊಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಕುಂದೂರು ಹೋಬಳಿಯ ಮಣಿಗನಹಳ್ಳಿ ಸಮೀಪ ಗುರುವಾರ ಸಂಜೆ ನಡೆದಿದೆ.
ತಾಲೂಕಿನ ಕುಂದೂರು ಹೋಬಳಿಯ ಮಣಿಗನಹಳ್ಳಿಯ ವಾಸಿ ಪುಟ್ಟರಾಜು (48) ಸಾವನ್ನಪ್ಪಿದ ದುರ್ದೈವಿ. ಜಯಣ್ಣ ಎಂಬವರಿಗೆ ತೀವ್ರಗಾಯವಾಗಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟ್ಟುರಾಜು ಅವರು ಜಯಣ್ಣರೊಂದಿಗೆ ಬೈಕ್ನಲ್ಲಿ ತಮ್ಮ ಗ್ರಾಮ ಮಣಿಗನಹಳ್ಳಿಗೆ ಹೋಗುವ ಸಂದರ್ಭದಲ್ಲಿ ಬೊಲೆರೋ ವಾಹನ ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಪುಟ್ಟರಾಜು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಜಯಣ್ಣ ಅವರಿಗೆ ಗಾಯವಾಗಿದ್ದು, ಆಲೂರು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.