ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಅರಸೀಕೆರೆ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ರೆಡ್ರಿಬ್ಬನ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಕಾಲೇಜು ಪ್ರಾಂಶುಪಾಲ ಪ್ರೊ. ಸೈಯದ್ ಬಾಷ ಶಿಬಿರ ಉದ್ಘಾಟಿಸಿದರು. ಜೀವರಕ್ಷಕ ನಿಧಿ ಹಾಗೂ ತಾಂತ್ರಿಕ ಸಲಹೆಗಾರ ಜಿ.ಈ. ಮೋಹನ್ ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು. ಜೆ.ಸಿ. ಆಸ್ಪತ್ರೆಯ ಐ.ಸಿ.ಟಿ.ಸಿ. ಕೌನ್ಸಿಲರ್ ಉಮಾ ವ್ಯಕ್ತಿಗೆ ತಗಲುವ ಮಾರಕ ರೋಗಗಳು ಮತ್ತು ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು. ಎನ್.ಎಸ್.ಎಸ್. ಅಧಿಕಾರಿ ಕೆ.ಎಸ್. ವಿಶ್ವನಾಥ್ ಸ್ವಾಗತಿಸಿದರು.
ಗ್ರಂಥಪಾಲಕ ಎಸ್. ಮಂಜುನಾಥ್ ವಂದಿಸಿದರು. ಹಲವು ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಇದೇ ವೇಳೆ ರಕ್ತದ ಗುಂಪು ಪರೀಕ್ಷೆ ನಡೆಸಲಾಯಿತು.