ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹನ್ನೊಂದು ಪರೀಕ್ಷಾ ಕೇಂದ್ರಗಳು

Rashmi Kasaragodu
Updated On : 28 Mar 2014, 1:35 am

ಅರಕಲಗೂಡು: ತಾಲೂಕಿನ ಒಟ್ಟು 53 ಪ್ರೌಢಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡುತ್ತಿರುವ 2832 ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸಲು ಶುಕ್ರವಾರದಿಂದ ಪರೀಕ್ಷೆಗಳು ಆರಂಭಗೊಳ್ಳಲಿದ್ದು,ಈ ಸಂಬಂಧ ಎಲ್ಲಾ ಪರೀಕ್ಷಾ ಕೇಂದ್ರಗಳು ಸಿದ್ಧಗೊಂಡಿವೆ. ತಾಲೂಕಿನ 11 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಅಕ್ರಮಗಳಿಗೆ ಅವಕಾಶಗಳು ಆಗದಂತೆ ಮತ್ತು ಸುಲಲಿತವಾಗಿ ಪರೀಕ್ಷೆಗಳು ಸಾಗುವಂತೆ ಮಾಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ರೇವಣ್ಣ ತಿಳಿಸಿದ್ದಾರೆ.
ಈ ಸಂಬಂಧ ವಿವರಗಳನ್ನು ನೀಡಿರುವ ಅವರು ತಾಲೂಕಿನಲ್ಲಿರುವ 31 ಸರ್ಕಾರಿ ಪ್ರೌಢಶಾಲೆಗಳು, 13 ಅನುದಾನಿತ ಪ್ರೌಢಶಾಲೆ ಮತ್ತು 9 ಅನುದಾನರಹಿತ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವರು. ಪರೀಕ್ಷೆ ಎದುರಿಸಲಿರುವ 2832 ವಿದ್ಯಾರ್ಥಿಗಳ ಪೈಕಿ 1392 ವಿದ್ಯಾರ್ಥಿಗಳು ಹಾಗೂ 1440 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲಿದ್ದು, ವಿದ್ಯಾರ್ಥಿನಿಯರ ಸಂಖ್ಯೆಯೇ ಅಧಿಕವಾಗಿದೆ.
ಕಾಪಿ ಹಾಗೂ ಇನ್ನಿತರ ಅಕ್ರಮಗಳನ್ನು ತಡೆಯಲು ಜಾಗೃತ ದಳ ನೇಮಿಸಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement