ಹಿರೇಮಠ್ಗೆ ಬ್ರದರ್ ಅಂದ ರೇವಣ್ಣ
ಇಂಧನ ಸಚಿವ ಡಿಕೆಶಿ ಅವರನ್ನು ಟೀಕಿಸಿದ ರೇವಣ್ಣ, ಇತ್ತೀಚೆಗೆ 11 ಭ್ರಷ್ಟ ಲೋಕಸಭೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದ ಹಿರೇಮಠ್ ಅವರನ್ನು ಬ್ರದರ್ ಎಂದು ಕರೆದರು. ಡಿಕೆಶಿ ಅವರನ್ನು ಟೀಕಿಸುವಾಗ, ಜನಾರ್ದನ ರೆಡ್ಡಿಗೆ ಆದ ಪರಿಸ್ಥಿತಿ ಡಿ.ಕೆ. ಶಿವಕುಮಾರ್ಗೆ ಆಗುತ್ತೆ ಎಂದ ರೇವಣ್ಣ, ಇದನ್ನು ನಾನು ಹೇಳುತ್ತಿಲ್ಲ. ಬ್ರದರ್ ಹಿರೇಮಠ್ ಅವರೇ ಸಾಕ್ಷಿ ಸಮೇತ ಹೇಳುತ್ತಿದ್ದಾರೆ. ಎಲ್ಲದಕ್ಕೂ ಒಂದು ಕೊನೆ ಅಂತ ಇರುತ್ತೆ ಅನ್ನೋ ನಂಬಿಕೆ ತಮಗಿದೆ ಎಂದರು.