ಎಸ್ಸೆಸ್ಸೆಲ್ಸಿ ಪರೀಕ್ಷೆ: ಮೊದಲ ದಿನ ಸುಸೂತ್ರ
ಹಾಸನ: ಜಿಲ್ಲಾದ್ಯಂತ ಶುಕ್ರವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭವಾಗಿದ್ದು, ಮೊದಲ ದಿನ ವಿದ್ಯಾರ್ಥಿಗಳು ಕನ್ನಡ ವಿಷಯ ಪರೀಕ್ಷೆ.
ಹಾಸನ ನಗರ ಸೇರಿದಂತೆ ಜಿಲ್ಲೆಯ 7 ತಾಲೂಕುಗಳಲ್ಲಿ ಪರೀಕ್ಷೆ ನಡೆಯಿತು. ನಕಲಿ ಮಾಡಿ ವಿದ್ಯಾರ್ಥಿಗಳು ಸಿಕ್ಕಿಬಿದ್ದು ಡಿಬಾರ್ ಆದ ದುರ್ಘಟನೆಗಳು ನಡೆದಿಲ್ಲ. ಏ. 1ರಂದು ಗಣಿತ ಪರೀಕ್ಷೆ ನಡೆಯಲಿದೆ ಎಂದು ನೊಡೆಲ್ ಅಧಿಕಾರಿ ಲತಾ ತಿಳಿಸಿದ್ದಾರೆ.
ಚಿರತೆ ದಾಳಿ, ನಾಲ್ವರಿಗೆ ಗಾಯ
ಹಾಸನ: ಚಿರತೆಯೊಂದು ದಾಳಿ ಮಾಡಿದ ಪರಿಣಾಮ ನಾಲ್ವರು ಗಾಯಗೊಂಡಿರುವ ಘಟನೆ ತಾಲೂಕಿನ ಸಾಲಗಾಮೆ ಹೋಬಳಿಯ ಆಲದಹಳ್ಳಿಯಲ್ಲಿ ಶುಕ್ರವಾರ ನಡೆದಿದೆ. ತಾಲೂಕಿನ ಸಾಲಗಾಮೆ ಹೋಬಳಿಯ ವಾಸಿಗಳಾದ ಜನಾರ್ಧನ್ ಮೂರ್ತಿ, ಸುನೀಲ್, ಲೋಕೇಶ್, ರವಿ ಎಂಬವರ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದರು. ಬೆಳಗ್ಗೆ ಗ್ರಾಮದ ಶುಂಠಿ ಹೊಲದಲ್ಲಿ ಈ ನಾಲ್ವರು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಎಕಾಎಕಿ ದಾಳಿ ಇಟ್ಟ ಚಿರತೆಯೊಂದು ಇವರ ಮೇಲೆ ಎರಗಿ ತೀವ್ರವಾಗಿ ಗಾಯಗೊಳಿಸಿದೆ. ಕೂಡಲೇ ಇವರನ್ನು ಜಿಲ್ಲಾಸ್ಪತ್ರೆಗೆ ಕರೆ ತಂದು ಚಿಕಿತ್ಸೆಯನ್ನು ಕೊಡಿಸಲಾಗಿದೆ.
ಜನರ ಆಗ್ರಹ: ಈ ಭಾಗದಲ್ಲಿ ಚಿರತೆಗಳು ಹಾವಳಿ ಹೆಚ್ಚಾಗಿದ್ದು, ಕೂಡಲೇ ಅರಣ್ಯ ಇಲಾಖೆಯವರು ಇಲ್ಲಿ ಇರುವಂತಹ ಚಿರತೆಗಳನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ.