ಕೋಮು ವಿಷ ಬಿತ್ತುವ 'ಕೈ'ಗಳಿಗೆ ಲಜ್ಜೆಯಾಗಬೇಕು
ಬೇಲೂರು: ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಧರ್ಮ ಮತ್ತು ಜಾತಿಗಳನ್ನು ಒಡೆದು ಆಳುವ ಪ್ರವೃತ್ತಿ ಮಾಡಿಕೊಂಡು ದೇಶಕ್ಕೆ ಮಾರಕ ಸಂದೇಶ ನೀಡಿರುವ ಸಿಎಂ ಸಿದ್ದರಾಮಯ್ಯನವರ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ತೀವ್ರ ವಾಗ್ದಾಳಿ ನಡೆಸಿದರು.
ಪಟ್ಟಣದ ಶ್ರೀವೀರಶೈವ ಕಲ್ಯಾಣ ಮಂಟಪದಲ್ಲಿ ಕೆಜೆಪಿ ಪಕ್ಷದ ಕಾರ್ಯಕರ್ತರು ಕೊರಟಿಕೆರೆ ಪ್ರಕಾಶ್ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾದಿ ಭಾಗ್ಯ ಯೋಜನೆ ಮೂಲಕ ಧರ್ಮ- ಧರ್ಮಗಳ ಮಧ್ಯೆ ಕಂದಕ ಉಂಟು ಮಾಡಿದ್ದಾರೆ ಎಂದರು.
ಕೇಂದ್ರದಲ್ಲಿನ ಕಾಂಗ್ರೆಸ್ ಸರ್ಕಾರ ಅಂದಿನ ನೆಹರು ಕಾಲದಿಂದ ಬಡತನ ನಿರ್ಮೂಲನೆ ಮಾಡಲಾಗುವುದು ಎಂದು ಹೇಳುತ್ತಾ ದೇಶ ಅಮೂಲ್ಯ ಸಂಪತ್ತು ಲೂಟಿ ಮಾಡಿ ದೇಶವನ್ನು ಆಧೋಗತಿಗೆ ತಳ್ಳಿ, ಬಡ ಭಾರತನ್ನಾಗಿಸಿದ್ದಾರೆ ಎಂದರು.
ಹೆಂಡ, ಸಾರಾಯಿಗೆ ಮಹತ್ವ: ಬಿಜೆಪಿ ಅಭ್ಯರ್ಥಿ ವಿಜಯ ಶಂಕರ್ ಮಾತನಾಡಿ, ರಾಜ್ಯದಲ್ಲಿ ಕುಡಿಯುವ ನೀರಿಗ ಸಮಸ್ಯೆ ಗ್ರಾಮೀಣ ಪ್ರದೇಶ ಹಾಗೂ ಪಟ್ಟಣದಲ್ಲಿ ಅಭಾವವಿದೆ. ಆದರೆ, ರಾಜ್ಯ ಕಾಂಗ್ರೆಸ್ ಪಕ್ಷ ಕುಡಿಯುವ ನೀರು ನೀಗಿಸುವ ಶಕ್ತಿ ಇಲ್ಲದ ಸಿದ್ದರಾಯಯ್ಯನವರು ಹೆಂಡ- ಸಾರಾಯಿಗೆ ಮಹತ್ವ ನೀಡುತ್ತಿದ್ದಾರೆ ಎಂದರು.
ಮೋದಿಯಲ್ಲಿ ಎದೆಗಾರಿಕೆ: ಬಿಜೆಪಿ ಮುಖಂಡ ಕೊರಟಿಗೆರೆ ಪ್ರಕಾಶ್ ಮಾತನಾಡಿ, ದೇಶವನ್ನು ಸುಸ್ಥಿತಿಗೆ ತೆಗೆದುಕೊಂಡು ಹೋಗುವ ಎದೆಗಾರಿಕೆ ಮೋದಿ ಅವರಲ್ಲಿ ಇದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರೇಣುಕುಮಾರ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಅಡಗೂರು ಆನಂದ್, ಬಿಜೆಪಿ ಮುಖಂಡ ನಾಯಕನಹಳ್ಳಿ ಮಹದೇವ್, ನವಿಲೆ ಅಣ್ಣಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯ ಅಮಿತ್ ಶೆಟ್ಟಿ, ಜಯಶೀಲಾ ಜಯಶಂಕರ್, ಈ.ಎಚ್.ಲಕ್ಷ್ಮಣ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮಮಹಾದೇವಯ್ಯ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ರವಿಕುಮಾರ್, ಪವರ್ತಯ್ಯ, ಸೋಮಶೇಖರ್, ಶೇಖರಯ್ಯ, ಮುಖಂಡರಾದ ಕೋಗಿಲೆಮನೆ ಅರುಣ್ ಕುಮಾರ್, ಆಶೋಕ್, ವಿಜಯಲಕ್ಷ್ಮೀ, ಬಸವಾನಂದಸ್ವಾಮೀಜಿ, ಡಾ.ನಾರಾಯಣಸ್ವಾಮಿ, ಲಕ್ಷ್ಮೀಶ್, ಕೇಳಹಳ್ಳಿ ರಾಜು, ಉಮೇಶ್ ಇತರರು ಇದ್ದರು.