ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಾಲಾಪರಾಧ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ

Rashmi Kasaragodu
Updated On : 29 Mar 2014, 1:37 am

ಹಾಸನ: ಸಮಾಜದಲ್ಲಿ ಬಾಲಾಪರಾಧ, ಸತಿ ಸಹಗಮನ ಪದ್ಧತಿ, ವೇಶ್ಯಾವೃತ್ತಿ, ಬಾಲ್ಯವಿವಾಹದಂತಹ ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಸಾಕಷ್ಟು ಸಂಶೋಧನೆ ನಡೆದರೂ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ನಗರದ ಸರ್ಕಾರಿ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಎಂ.ಕೆ. ದೇವಪ್ಪ ವಿಷಾದಿಸಿದರು.
ಅವರು ನಗರದ ಎನ್.ಡಿ.ಆರ್. ಪ್ರಥಮ ದರ್ಜೆ ಕಾಲೇಜಿನ ಸಮಾಜ ಶಾಸ್ತ್ರ ವಿಭಾಗದ ವತಿಯಿಂದ ಸಮಾಜ ಶಾಸ್ತ್ರೀಯ ಸಂಶೋಧನೆ ವಿಷಯ ಕುರಿತು ಇತ್ತೀಚೆಗೆ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ  ಮಾತನಾಡುತ್ತಿದ್ದರು.
ಅವೈಜ್ಞಾನಿಕ ವಿಂಗಡಣೆ: ಮಾನವನ ಉಗಮ ಎಂದಿನಿಂದ ಆಯಿತೋ ಅಂದಿನಿಂದಲೇ ಸಂಶೋಧನೆಗಳು ಪ್ರಾರಂಭವಾದವು.
 ಡಾರ್ವಿನ್ನಂಥ ವಿಜ್ಞಾನಿಗಳು ಮಂಗನಿಂದ ಮಾನವ ಎಂದು ಸಾರಿದ್ದರೂ, ಹಿಂದೂ ಧರ್ಮದಲ್ಲಿ ಮಾನವನ ಉಗಮವನ್ನು ಬ್ರಹ್ಮನ ಮುಖದಿಂದ ಬ್ರಾಹ್ಮಣ, ತೋಳುಗಳಿಂದ ಕ್ಷತ್ರಿಯ, ತೊಡೆಯಿಂದ ವೈಶ್ಯ, ಪಾದದಿಂದ ಶೂದ್ರ ಎಂಬುದಾಗಿ ತಿಳಿಸಿರುವುದನ್ನು ಗಮನಿಸಿದಾಗ ವೈಜ್ಞಾನಿಕವಾದ ಸಂಶೋಧನೆ ಇಲ್ಲದೆ ಉದ್ದೇಶ ಪೂರ್ವಕವಾಗಿ  ಮಾನವನ ಉಗಮವನ್ನು ಸೃಷ್ಟಿಸಿದೆ ಎನಿಸುತ್ತದೆ ಎಂದರು.
ಹೆಚ್ಚಿನ ಆದ್ಯತೆ: ಎವಿಕೆ ಕಾಲೇಜಿನ ಸಹ ಪ್ರಾಧ್ಯಾಪಕ ವೆಂಕಟೇಶ ಮಾತನಾಡಿ, ಇತ್ತೀಚೆಗೆ ಎಲ್ಲಾ  ಕ್ಷೇತ್ರಗಳಲ್ಲಿ ಎಂದರೆ ಬಿ.ಕಾಂ, ಮೆಡಿಕಲ್, ಐ.ಎ.ಎಸ್. ಕೆ.ಎ.ಎಸ್. ಗಳಲ್ಲಿಯೂ ಕೂಡ  ಸಮಾಜ ಶಾಸ್ತ್ರವನ್ನು ಆಯ್ಕೆ ಮಾಡಿಕೊಂಡಿರುವುದನ್ನೇ ಗಮನಿಸಿದರೆ ಸಮಾಜಶಾಸ್ತ್ರಕ್ಕೆ ಹೆಚ್ಚಿನ ಆದ್ಯತೆ ಲಭ್ಯವಾಗುತ್ತಿರುವುದು ಕಂಡು ಬರುತ್ತದೆ ಎಂದು ಹೇಳಿದರು.
 ಎನ್.ಡಿ. ಆರ್.ಕೆ. ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಎಸ್. ಕೂಗೇಗೌಡ, ಅಧ್ಯಕ್ಷತೆ ವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement