ರೋಟರಿ ಸಂಸ್ಥೆಯಿಂದ ಕೋಮು ಸೌಹಾರ್ದ ಸಭೆ
ಹಾಸನ: ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ಧತೆ ಕಾಪಾಡುವಿಕೆ ಅಂತಾರಾಷ್ಟ್ರೀಯ ರೋಟರಿ ಆರು ಮುಖ್ಯ ಅಂಶಗಳ ಕಾರ್ಯಕ್ರಮಗಳಲ್ಲೊಂದಾಗಿದೆ ಎಂದು ಹಾಸನ ಮಿಡ್ಟೌನ್ ಅಧ್ಯಕ್ಷ ಆರ್. ಸತ್ಯನಾರಾಯಣ ಹೇಳಿದರು.
ಅವರು ರೋಟರಿ ಹಾಸನ ಮಿಡ್ಟೌನ್ ವತಿಯಿಂದ ವಿಶ್ವನಾಥನಗರ ಬಡಾವಣೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸೌಹಾರ್ಧ ಸಭೆ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಭಾಷಣಕಾರರಾಗಿದ್ದ ಝೋನಲ್ ಲೆಫ್ಟನೆಂಟ್ ಡಾ. ಸುಧೀರ್ ಬಿ. ಬೆಂಗಳೂರ ಅವರು ಮಾತನಾಡಿ, ಹಾಸನ ವಿವಿಧ ಕೋಮುಗಳ ನಡುವೆ ವಿಶ್ವಾಸ ಮೂಡಿಸಲು ವಿಶೇಷವಾಗಿ ಹಬ್ಬ, ಹರಿದಿನಗಳಲ್ಲಿ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.
ವಿವಿಧ ಕೋಮುಗಳ ಸುಮಾರು 20 ಮುಖಂಡರು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಡಾ. ದಿನೇಶ್ ಬಿ ಕಬ್ಳಿಗೆರೆ, ಜಗದೀಶ್, ಕ್ರಾಂತಿ, ಸ್ವಾತಂತ್ರ್ಯ ಹೋರಾಟಗಾರ ಲಕ್ಕಪ್ಪ, ಹಬಿಬುಲ್ಲಾ, ಆಯಿಷ್ ರಜಾಕ್, ಮುಷಿರ್ ಅಹಮ್ಮದ್, ಬಾಬು, ದಲಿತ ಮುಖಂಡ ಬಿ.ಜೆ. ಕೃಷ್ಣ ಇದ್ದರು. ನಗರಸಭೆ ಸದಸ್ಯ ಸಿ. ಶುಭ ವಂದಿಸಿದರು.