ಕರ್ಣಾಟಕ ಬ್ಯಾಂಕಿನ 586ನೇ ಶಾಖೆ ಉದ್ಘಾಟನೆ
ಹಾಸನ: ನಗರದ ಕುವೆಂಪು ನಗರದಲ್ಲಿ ಕರ್ಣಾಟಕ ಬ್ಯಾಂಕ್ ಲಿಮಿಟೆಡ್ನ 586ನೇ ಶಾಖೆಯನ್ನು ಎಸ್.ಬಿ.ಜಿ. ಗ್ರೂಪ್ನ ಉದ್ಯಮಿಗಳಾದ ಸುಜಾತ ನಾರಾಯಣ್ ಇತ್ತೀಚೆಗೆ ಉದ್ಘಾಟಿಸಿದರು. 670ನೇ ಎಟಿಎಂ ಅನ್ನು ಭಾರತಿ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎಲ್. ಮುದ್ದೇಗೌಡ ಗುರುವಾರ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಭಟ್ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್ಗಳಿಂದ ಠೇವಣಿದಾರರಿಗೆ ಶೇ. 0.25ರಷ್ಟು ಹೆಚ್ಚು ಬಡ್ಡಿ ನೀಡಲಾಗುತ್ತಿದೆ ಎಂದರು. ರು. 3 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಬೆಳೆ ಸಾಲ ಪಡೆದವರಿಗೆ ರಾಷ್ಟ್ರೀಕೃತ ಬ್ಯಾಂಕಿನಂತೆ ಇಲ್ಲಿಯೂ ಕೃಷಿಕರಿಗೆ ಶೇ. 4ರಂತೆ ಬೆಳೆ ಸಾಲ ನೀಡಲಾಗುತ್ತಿದೆ ಎಂದರು. ಬಿ.ಕೆ. ಮಂಜುನಾಥ್ ಸ್ವಾಗತಿಸಿದರು. ಬಾಲಕ ಮಾಸ್ಟರ್ ಎಚ್.ಆರ್. ರಂಜನ್ ಪ್ರಾರ್ಥಿಸಿದರು. ಶಾಖೆಯ ವ್ಯವಸ್ಥಾಪಕ ನಂದಗೋಪಾಲ್ ಸಿ.ಬಿ. ವಂದಿಸಿದರು.