'ಕಾಂಗ್ರೆಸ್ ಮುಗಿಸುವ ಜೆಡಿಎಸ್ ಸಂಚು ವಿಫಲ'
ಹಾಸನ: ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಜೆಡಿಎಸ್ ಮಾಡಿದ್ದ ಸಂಚು ಹಿಂದೆಲ್ಲಾ ವಿಫಲವಾಗಿವೆ ಎಂದು ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ಹೇಳಿದರು. ನಗರದ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈಸೂರಿನಲ್ಲಿ ಕಾಂಗ್ರೆಸನ್ನು ಮುಗಿಸಲು ಜೆಡಿಎಸ್ನವರು ಹೊರಟಿದ್ದರು. ಆಗ ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ 252 ಓಟುಗಳ ಅಂತರದಲ್ಲಿ ಜಯಗಳಿಸಿದ್ದೆವು. ಹಾರ್ಟ್ ಹಟ್ಯಾಕ್ ಆದ್ರೂ ಸಾಯ್ತಾರೆ, ವಾಂತಿ- ಭೇದಿಯಾದ್ರೂ ಜನ ಸಾಯ್ತಾರೆ. ಅಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಒಳಗೆ ಬಂದರು, ಶಿವಬಸಪ್ಪ ಹೊರಗೆ ಹೋದರು ಎಂದು ಟೀಕಿಸಿದರು. ಕೆಜೆಪಿಯಿಂದ ಬಿಜೆಪಿಗೆ ವಾಪಸ್ ಬಂದಿರುವ ಯಡಿಯೂರಪ್ಪ ಚುನಾವಣೆಯ ನಂತರ ಬಿಜೆಪಿನಲ್ಲಿ ಇರೋದಿಲ್ಲ. ಇದನ್ನು ವೀರಶೈವರು ಅರ್ಥ ಮಾಡಿಕೊಳ್ಳಬೇಕು ಎಂದರು.