ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಕೀಳರಿಮೆ ತೊರೆದರೆ ಮಹಿಳಾ ಸಬಲೀಕರಣ ಸಾಧ್ಯ'

Rashmi Kasaragodu
Updated On : 30 Mar 2014, 1:57 am

ಹಾಸನ: ಮಾನಸಿಕವಾಗಿ ನಾನು ಮಹಿಳೆ, ಸಬಲೆ ಎಂಬ ಆತ್ಮ ಸ್ಥೈರ್ಯವನ್ನು ತುಂಬಿಕೊಂಡು ಕೀಳರಿಮೆ ತೊರೆದು ಕಾರ್ಯನಿರ್ವಹಿಸಿದರೆ  ಮಹಿಳಾ ಸಬಲೀಕರಣ ಸಾಧ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಿ.ಎಲ್. ಶ್ಯಾಮಲಾ ದೇವಿ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಕಲಾ ಕಾಲೇಜು, ಸ್ನಾತಕೋತ್ತರ ಸಮಾಜಶಾಸ್ತ್ರ ಅಧ್ಯಯನ ವಿಭಾಗ ಮತ್ತು ಅನನ್ಯ ಟ್ರಸ್ಟ್ಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ವಿಕಲಚೇತನ ವಿದ್ಯಾರ್ಥಿಗಳಿಗೆ ಕಲಿಕಾ ವಿತರಣ ಕಾರ್ಯಕ್ರಮವನ್ನು ಉದ್ಫಾಟಿಸಿ ಅವರು ಮಾತನಾಡಿದರು.  
ಇದೇ ಸಂದರ್ಭದಲ್ಲಿ ಡಾ. ಶ್ಯಾಮಲದೇವಿ ಮತ್ತು ವಿಜಯಕುಮಾರಿ ಮುರಾರಪ್ಪಯವರನ್ನು ಸಾಧಕತೆಯ ಸಲುವಾಗಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಡಾ.ಎಂ.ಕೆ. ದೇವಪ್ಪ, ಡಿ. ವನಿತಾ ಮತ್ತು ಮನ್ಸೂರ್ ಪಾಷ ಹಾಗೂ ಇತರೆ ಅಧ್ಯಾಪಕರು ಇದ್ದರು. ಈ ಕಾರ್ಯಕ್ರಮದಲ್ಲಿ ದೊರೆಸ್ವಾಮಿ ಮತ್ತು ತಂಡದವರು ಪ್ರಾರ್ಥಿಸಿದರು. ವೇಣುಗೋಪಾಲ್ ಸ್ವಾಗತಿಸಿದರು. ಜಯಂತ್ ನಿರೂಪಿಸಿದರು.





Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement