'ಚುನಾವಣೆ ಸಂದರ್ಭದಲ್ಲೇ ಮೊಸಳೆ ಕಣ್ಣೀರೇಕೆ ?'
ಬೇಲೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕಳೆದ ನಾಲ್ಕು ವರ್ಷದಿಂದ ಕ್ಷೇತ್ರದ ಬಗ್ಗೆ ಚಿಂತನೆ ಮಾಡದೆ, ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಮೊಸಳೆ ಕಣ್ಣೀರು ಹಾಕುವ ಇವರಿಗೆ ಏಕೆ ಓಟು ನೀಡಬೇಕು ಎಂದು ಮಾಜಿ ಸಂಸದ ಹೆಚ್.ಕೆ. ಜವರೇಗೌಡ ಪ್ರಶ್ನಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಜಿಲ್ಲೆಯ ಮತದಾರ ನೂತನ ಬದಲಾವಣೆ ಬಯಸಿದ್ದಾನೆ. ಆದ್ದರಿಂದ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ವಿಶ್ವಾಸ ವ್ಯಕ್ತ ಪಡಿಸಿದರು.
ಹಳೇಬೀಡು ಮತ್ತು ಮಾದಿಹಳ್ಳಿ ಹೋಬಳಿ ಏತನೀರಾವರಿ ಯೋಜನೆ ಮಾ. 31 ರೊಳಗೆ ನೀರು ಹರಿಸಲು ಸ್ಥಳೀಯ ಶಾಸಕ ವೈ.ಎನ್. ರುದ್ರೇಶ ಗೌಡ ಶತ ಪ್ರಯತ್ನ ಮಾಡುತ್ತಿದ್ದಾರೆ ಎಂದರು. ಕಾಂಗ್ರೆಸ್ ಮುಖಂಡ ವೈ.ಎನ್. ಕೃಷ್ಣೇಗೌಡ ಇತರರು ಇದ್ದರು.