ದೇವೇಗೌಡರಿಂದ ಹಿಂದುಳಿದ ವರ್ಗಕ್ಕೆ ಅಧಿಕಾರ
ಹಾಸನ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಅತೀ ಹಿಂದುಳಿದ ವರ್ಗಗಳ ಜನಾಂಗಕ್ಕೆ ರಾಜಕೀಯ ಅಧಿಕಾರ ನೀಡಿದ್ದು, ಅಲ್ಪಸಂಖ್ಯಾತರ ವರ್ಗದ ಜನತೆಯ ಪ್ರೀತಿ ಗಳಿಸಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಚನ್ನವೀರಪ್ಪ ತಿಳಿಸಿದ್ದಾರೆ.
ಸಮಾಜದ ಅತೀ ಹಿಂದುಳಿದ ವರ್ಗ, ಜಾತಿ ಅಲ್ಪಸಂಖ್ಯಾತರ, ಪರಿಶಿಷ್ಟ ವರ್ಗ, ವರ್ಗದ ಸತತ ಅಭಿವೃದ್ಧಿಗೆ ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ದಿ. ದೇವರಾಜ ಅರಸು ಅವರು ಶ್ರಮಿಸಿದ್ದರು. ಈ ಕೆಲಸವನ್ನು ಇಂದು ದೇವೇಗೌಡರು ಮುಂದುವರಿಸಿದ್ದಾರೆ ಎಂದು ಅವರು ತಿಳಿಸಿದರು. ಅತೀ ಹಿಂದುಳಿದ ವರ್ಗದವನಾದ ನನಗೆ ಜೆಡಿಎಸ್ ಕಾರ್ಯಾಧ್ಯಕ್ಷ ಸ್ಥಾನ, ಪರಿಶಿಷ್ಠ ಜಾತಿಯ ಶ್ರೀವಿದ್ಯಾ ಆನಂದ್ಗೆ ನಗರಸಭೆ ಅಧ್ಯಕ್ಷ ಸ್ಥಾನ, ಬ್ರಾಹ್ಮಣ ಜನಾಂಗದ ಬೇಲೂರಿನ ತೊ.ಚ. ಅನಂತಸುಬ್ಬರಾಯ ಅವರಿಗೆ ಬೇಲೂರು ಪುರಸಭೆ ಅಧ್ಯಕ್ಷ ಸ್ಥಾನ ನೀಡಿ ಸಹಕರಿಸಿದ್ದಾರೆ ಎಂದರು.