'ನೆಲ,ಜಲ ಸಂರಕ್ಷಣೆ ಬಿಜೆಪಿಯಿಂದ ಮಾತ್ರ'
ಸಕಲೇಶಪುರ: ನೆಲ, ಜಲ ಹಾಗೂ ಸಂಸ್ಕೃತಿ ರಕ್ಷಣೆಯು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಮಾಜಿ ಸಂಸದೆ ಬಿಜೆಪಿ ಮುಖಂಡರಾದ ತೇಜಸ್ವಿನಿ ರಮೇಶ್ ಹೇಳಿದರು.ಪಟ್ಟಣದ ಹಳೇ ಬಸ್ ನಿಲ್ದಾಣದ ಎಸ್.ಎಂ ಟವರ್ಸ್ನಲ್ಲಿ ತಾಲೂಕು ವಿಶ್ವ ಹಿಂದೂ ಪರಿಷತ್ನ ಭಜರಂಗದಳದ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಒಂದು ದಿನದ ಬೈಠಕ್ನಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಹಿಂದೂ ಸಂಘಟನೆಗಳನ್ನು ಕೋಮುವಾದಿಗಳೆಂದು ದೂಷಿಸುತ್ತಲೇ ಬಂದಿದೆ. ಅಬ್ದುಲ್ ಕಲಾಂರವರಿಗೆ ರಾಷ್ಟ್ರಪತಿಯಾಗಲು ಅವಕಾಶ ಮಾಡಿಕೊಟ್ಟ ಬಿಜೆಪಿ ಹೇಗೆ ಕೋಮುವಾದಿಯಾಗುತ್ತದೆಂದು ಅವರು ಪ್ರಶ್ನಿಸಿದರು. ವಿಎಚ್ಪಿ ಮೈಸೂರು ವಿಭಾಗ ಪ್ರಮುಖ್ ಮುರಳೀಧರ್, ಅ.ಭಾ. ವಿಶ್ವ ಹಿಂದೂ ಪರಿಷತ್ ನಾಗೇಂದ್ರ ಪ್ರಸಾದ್, ಜಿಲ್ಲಾ ಬಜರಂಗದಳ ಸಂಚಾಲಕ ವಿಜಯ್ ಕುಮಾರ್, ಬಜರಂಗದಳ ರಘು, ಚೈತ್ರಾನಂದ, ವಿಕ್ರಮ್, ಕೌಶಿಕ್, ಮಂಜು, ಕಾರ್ತೀಕ್, ಸಂತೋಷ್ ಗೌಡ, ಪ್ರವೀಣ್ ಹೊಂಕರವಳ್ಳಿ, ಸತೀಶ್ ಜಿಪಿನಗರ, ಅಶೋಕ, ಭಾಸ್ಕರ್ ಇದ್ದರು.