ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪಥಸಂಚಲನ

Rashmi Kasaragodu
Updated On : 30 Mar 2014, 1:59 am

ಜಾವಗಲ್: ಮತದಾರರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವುದು,ಶಾಂತಿಮತ್ತು ನಿರ್ಭೀತಿಯಿಂದ ಮತದಾನ ಮಾಡುವಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಾವಗಲ್ ಪೊಲೀಸ್ ಠಾಣೆ ವತಿಯಿಂದ ಪಥಸಂಚಲನ ಕಾರ್ಯಕ್ರಮ ನಡೆಸಲಾಯಿತು. ಡಿವೈಎಸ್ಪಿ ಮಂಜುನಾಥ್, ವೃತ್ತನಿರೀಕ್ಷಕ ಆರ್.ವಿ. ಗಂಗಾಧರಪ್ಪರವರ ನೇತೃತ್ವದಲ್ಲಿ ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಯ 50ಕ್ಕೂ ಹೆಚ್ಚು ಯೋಧರು ಪಟ್ಟಣದ ದರ್ಗಾದಿಂದ ಠಾಣೆವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಥಸಂಚಲನ ನಡೆಸಿ ಮತದಾರರಲ್ಲಿ ಜಾಗೃತಿ ಮೂಡಿಸಿದರು. ಠಾಣಾಧಿಕಾರಿ ನವೀನ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ಉಚಿತ ಶಿಬಿರ
ಹಾಸನ: ತಾಲೂಕಿನ ಕಂದಲಿಯ ವಿದ್ಯಾಪೀಠದಲ್ಲಿ ಇರುವ ಹಾಸನ ಕ್ಯಾನ್ಸರ್ಸೆಂಟರ್ನಲ್ಲಿ ಏ.1 ರಂದು ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಕ್ಯಾನ್ಸರ್ ಪತ್ತೆಯಾದ ರೋಗಿಗಳಿಗೆ ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ ದೂರವಾಣಿ ಸಂಖ್ಯೆ. 72040 59259.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement