ಬಿಜೆಪಿ, ಕೆಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ
ಹಾಸನ: ಬಿಜೆಪಿ ಹಾಗೂ ಕೆಜೆಪಿ ಕಾರ್ಯಕರ್ತರು ತೊರೆದು ಶನಿವಾರ ಕಾಂಗ್ರೆಸ್ಗೆ ಸೇರ್ಪಡೆಗೊಂಡರು. ನಗದರ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿಯ ಜಿ.ಟಿ. ಕುಮಾರ್, ಕೆಜೆಪಿಯ ಅಗಿಲೆ ಯೋಗೇಶ್, ನಗರಸಭೆ ಮಾಜಿ ಸದಸ್ಯ ಬಂಗಾರಿ ಮಂಜು, ಸಮೀರ್ ಅಹಮದ್, ಗೊರೂರು ಸಲೀಂ, ಮಂಜುಳ, ಯೋಗೇಶ್, ಜವರಯ್ಯ, ಭವಾನಿ, ಲೋಲಾಕ್ಷಿ, ಸಾವಿತ್ರಮ್ಮ, ಕೃಷ್ಣೇಗೌಡ, ಕಲ್ಯಾಣಿ, ಸುರೇಶ್, ಮರಿಯಪ್ಪ, ಸಿದ್ದಯ್ಯ ಸೇರಿದಂತೆ ನಾನಾ ರಾಜಕೀಯ ಪಕ್ಷಗಳು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು.