ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮರಕ್ಕೆ ಬೈಕ್ ಡಿಕ್ಕಿ ಯುವಕ ಸಾವು: ಗ್ರಾಮಸ್ಥರ ಪ್ರತಿಭಟನೆ

Rashmi Kasaragodu
Updated On : 30 Mar 2014, 1:57 am

ಬೇಲೂರು: ಇಲ್ಲಿನ ಸಕಲೇಶಪುರ ರಸ್ತೆಯ ಸನ್ಯಾಸಿಹಳ್ಳಿ ಗ್ರಾಮದ ಬಳಿ ಶುಕ್ರವಾರ ಬೈಕ್ ಮರಕ್ಕೆ ಡಿಕ್ಕಿ ಹೊಡೆದು ಒಬ್ಬ ಮೃತಪಟ್ಟಿದ್ದು ಮತ್ತೊಬ್ಬನಿಗೆ ತೀವ್ರ ಪೆಟ್ಟು ಬಿದ್ದಿದೆ. ಹಳೆ ಉತ್ಪಾತನಹಳ್ಳಿಯ ಯೋಗೇಶ್ (24) ಮೃತಪಟ್ಟ ವ್ಯಕ್ತಿ. ತನ್ನೂರಿನಿಂದ ಬೇಲೂರಿಗೆ ಬರುತ್ತಿದ್ದಾಗ ಮುಖ್ಯರಸ್ತೆಗೆ ಸಂಪರ್ಕ ಪಡೆಯುವ ತಿರುವಿನಲ್ಲಿ ಬೈಕ್ ಚಾಲಕನ ಹಿಡಿತ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿದೆ.
ಪ್ರತಿಭಟನೆ: ಅಪಘಾತದ ನಡೆದ ಸ್ಥಳದ ರಸ್ತೆಯ ಪಕ್ಕದಲ್ಲಿ ಮರಗಳನ್ನು ತೆಗೆಸದಿರುವುದೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿ ಹಳೆ ಉತ್ಪಾತನಹಳ್ಳಿ, ಸನ್ಯಾಸಿಹಳ್ಳಿ ಗ್ರಾಮಸ್ಥರು ದಿಢೀರ್ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರು. ಅಪಘಾತ ನಡೆದು ಸಾಕಷ್ಟು ಸಮಯವಾದರೂ ಆ್ಯಂಬುಲೆನ್ಸ್ ಬಾರದಿರುವುದು ಗ್ರಾಮಸ್ಥರನ್ನು ಮತ್ತಷ್ಟು ಕೆರಳಿಸಿತು. ಪ್ರತಿಭಟನೆ ವೇಳೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಸಿಪಿಐ ಕೆ.ಎಲ್.ಗಣೇಶ್, ಪಿಎಸ್ಐ ಅಶ್ವಿನ್ ಕುಮಾರ್ ಸ್ಥಳಕ್ಕೆ ಆಗಮಿಸಿ ಮನವಿ ಮಾಡಿದ್ದರ ಮೇರೆಗೆ  ರಸ್ತೆತಡೆಯನ್ನು ಹಿಂಪಡೆಯಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement