ರಾಜ್ಯ ಮೀಸಲು ಪಡೆಗೆ ನೇಮಕಕ್ಕೆ ಅರ್ಜಿ ಆಹ್ವಾನ
ಹಾಸನ: ರಾಜ್ಯ ರಿಸರ್ವ್ ಪೊಲೀಸ್, ಬೆಳಗಾವಿಯ 2ನೇ ಪಡೆ, ಮೈಸೂರಿನ 5ನೇ ಪಡೆ, ಮಂಗಳೂರಿನ 7ನೇ ಪಡೆ, ಶಿವಮೊಗ್ಗದ 8ನೇ ಪಡೆ, ಶಿಗ್ಗಾವಿಯ 10ನೇ ಪಡೆ ಮತ್ತು ಹಾಸನದ 11ನೇ ಪಡೆಗಳಲ್ಲಿ ಖಾಲಿ ಇರುವ ವಿಶೇಷ ಪೇದೆಗಳ ಭರ್ತಿಗೆ ಆನ್ಲೈನ್ ಮೂಲಕ ಮಾ. 30ರೊಳಗೆ ಅರ್ಜಿ ಆಹ್ವಾನಿಸಲಾಗಿದೆ. ಜಾಲತಾಣ ಢಿಢಿಢಿ.್ಞಡಠ.್ಜ್ಟಢ.್ಝಟಿ. ಶುಲ್ಕ ರು. 250, ಪರಿಶಿಷ್ಟ ಜಾತಿ, ವರ್ಗಕ್ಕೆ ಸೇರಿದವರು ರು. 100 ಅರ್ಜಿ ಶುಲ್ಕ ಪಾವತಿಸಬೇಕು. ಮಾ. 30ರಂತೆ 10ನೇ ತರಗತಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು 18 ವರ್ಷದಿಂದ 25 ವರ್ಷದೊಳಗಿರಬೇಕು. ಮೀಸಲಾತಿ ಅಭ್ಯರ್ಥಿಗಳಿಗೆ 2 ವರ್ಷದ ಸಡಿಲಿಕೆ ಇದೆ. 170 ಸೆಂ.ಮೀ. ಇತರ (ಮಹಿಳಾ ಅಭ್ಯರ್ಥಿಗಳಿಗೆ 155 ಸೆಂ.ಮೀ.) ಪುರುಷರಿಗೆ ಎದೆ ಸುತ್ತಳತೆ, 81 ಸೆಂ.ಮೀ.ರಿಂದ 86 ಸೆ.ಂಮೀ ಇರಬೇಕು. ಮಹಿಳೆಯರಿಗೆ ಕನಿಷ್ಠ ತೂಕ 45 ಕೆಜಿ ಇರಬೇಕು. ದೈಹಿಕ ಸಾಮರ್ಥ್ಯದ ಪರೀಕ್ಷೆಯಲ್ಲಿ 10 ನಿಮಿಷಗಳೊಳಗೆ 2 ಕಿ.ಮೀ. ಓಟ, 3.80 ಮೀ. ಉದ್ದ ಜಿಗಿತ, 1.20 ಮೀ. ಎತ್ತರ ಜಿಗಿತ ಮತ್ತು 7.26 ಕೆಜಿ ತೂಕದ ಶಾಟ್ಫುಟ್ ಅನ್ನು 5.60 ಮೀ. ಎಸೆಯಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. 984549336 ಸಂಪರ್ಕಿಸಲು ಕೋರಲಾಗಿದೆ.