ಸರ್ಕಾರಿ ಶಾಲೆ ಮುಚ್ಚುವ ಪರಿಸ್ಥಿತಿ ದುರದೃಷ್ಟಕರ
ಆಲೂರು: ಪೋಷಕರ ಖಾಸಗಿ ಶಾಲಾ ವ್ಯಾಮೋಹ ಹಾಗೂ ಸರ್ಕಾರಿ ಶಾಲೆಗಳ ಮೇಲಿನ ಅಸಡ್ಡೆತನದಿಂದಾಗಿ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿರುವುದು ದುರದೃಷ್ಟಕರ ಎಂದು ಮೊನೋ ರೈಲ್ವೇ ಮುಖ್ಯಸ್ಥ ನಾಗೇಂದ್ರಪ್ಪ ವಿಷಾದಿಸಿದರು.
ಅವರು ಪಟ್ಟಣದ ಮಾದರಿ ಹಿರಿಯ ಪ್ರಾಥಮಿಕ ಪಾಠಸಾಲೆಯ ಶತಮಾನೋತ್ಸವ ಕಾರ್ಯಕ್ರಮವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಪ್ರಥಮವಾಗಿ ಪ್ರಾರಂಭವಾದ ಈ ಶಾಲೇಯ ಶತಮಾನೋತ್ಸವ ಕಾರ್ಯಕ್ರಮವನ್ನು ಆಚರಿಸುತ್ತಿರುವುದು ಸಂತಸದ ವಿಚಾರ. ಆದರೆ, ಸರ್ಕಾರಿಶಾಲೆಗಳಲ್ಲಿ ಓದಿದವರು ಉದ್ಧಾರವಾಗುವುದಿಲ್ಲ ಎಂಬ ಮನೋಭಾವದಿಂದಾಗಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಈ ಶಾಲೆಯಲ್ಲಿ ಈಗ ಕೇವಲ 40 ವಿದ್ಯಾರ್ಥಿಗಳಿರುವುದು ಬೇಸರದ ವಿಷಯ ಎಂದರು. ಇದೇ ಶಾಲೆಯಲ್ಲಿ ಓದಿದ ನಾನು ಮೆಟ್ರೋ, ಮೋನೋ ರೈಲುಗಳ ಕಾಮಗಾರಿಯ ಮುಖ್ಯಸ್ಥನಾಗಿರುವುದು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗಮಾಡಿದವರೂ ಉನ್ನತ ಸ್ಥಾನಗಳಿಗೆ ತಲುಪುತ್ತಾರೆಂಬುದಕ್ಕೆ ಉದಾಹಾರಣೆ ಎಂದರು.
ಅದ್ಧೂರಿ ಸಮಾರಂಭ: ಅಧ್ಯಕ್ಷತೆ ವಹಿಸಿ ಮಾತನಾಡಿದ ಹಳೆಯ ವಿದ್ಯಾರ್ಥಿಗಳ ಸಂಘದ ಅದ್ಯಕ್ಷ ಎ.ಬಿ.ನಾಗರಾಜ್, ಶಾಲೆಯ ಶತಮಾನೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿತ್ತು. ಆದರೆ ಚುನಾವಣಾ ನೀತಿಸಂಹಿತೆ ಜಾರಿಯದ ಕಾರಣ ಇಂದು ಸಾಂಕೇತಿಕವಾಗಿ ಆಚರಿಸಿ ಚುನಾವಣಾ ಪ್ರಕ್ರಿಯೆ ಮುಗಿದನಂತರ ಮೇ ತಿಂಗಳಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು ಎಂದರು.
ಪಪಂ ಅದ್ಯಕ್ಷೆ ನೀಲುಪರ್, ಎಂ.ಬಿ. ವಿಜಯಕಾಂತ್, ಕೆ.ವೈ. ಲಷ್ಮೇಗೌಡ, ವೆಂಕಟಯ್ಯ, ತಿರುಮಲಯ್ಯ, ಗುಲಾಂಸತ್ತಾರ್, ರುಕ್ಮಿಣಿ, ಜಗದಿಶ್, ಗಂಗಾದರಪ್ಪ, ವರದರಾಜ್, ಟಿ.ಪಿ. ನಾಗರಾಜ್, ಇತರರುಇದ್ದರು, ಎ.ಟಿ. ಮಂಜುನಾಥ್ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಮೋಹನ್ ವಂದಿಸಿದರು. ಶಿಕ್ಷಕಿ ದಾಕ್ಷಾಯಿಣಿ ನಿರೂಪಿಸಿದರು.