ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಲಲಿತ

Rashmi Kasaragodu
Updated On : 30 Mar 2014, 11:20 am

ಜಾವಗಲ್: ಜಾವಗಲ್ ಹೋಬಳಿಯ ಜಾವಗಲ್ ಸರ್ಕಾರಿ ಪ.ಪೂ. ಕಾಲೇಜು, ಕೋಳಗುಂದ ಸರ್ಕಾರಿ ಪ.ಪೂ. ಕಾಲೇಜು, ಹಾಗೂ ಕಲ್ಯಾಡಿ ಸರ್ಕಾರಿ ಪ್ರೌಢಶಾಲೆ ಸೇರಿದಂತೆ 3 ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇತ್ತೀಚೆಗೆ ಪ್ರಾರಂಭವಾಯಿತು.
ಜಾವಗಲ್ ಪರೀಕ್ಷಾ ಕೇಂದ್ರದಲ್ಲಿ ಜಾವಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ, ಡಾ. ಆಂಬೇಡ್ಕರ್ ಪ್ರೌಢಶಾಲೆ, ಮಾಡೆಲ್ ಪ್ರೌಢಶಾಲೆ, ನೇರ್ಲಿಗೆ ಹಾಗೂ ಬಂದೂರು ಸರ್ಕಾರಿ ಪ್ರೌಢಶಾಲೆಯ ಒಟ್ಟು 239 ವಿದ್ಯಾರ್ಥಿಗಳು, 3 ರಿಪೀಟರ್ಸ್ ವಿದ್ಯಾರ್ಥಿಗಳು ಸೇರಿ ಒಟ್ಟು 242, ಕೋಳಗುಂದ ಕೇಂದ್ರದಲ್ಲಿ ಹಂದ್ರಾಳು, ಅರಕೆರೆ, ಎಸ್. ಡಿಗ್ಗೇನಹಳ್ಳಿ ಪ್ರೌಢಶಾಲೆಯ ಒಟ್ಟು 201 ವಿದ್ಯಾರ್ಥಿಗಳು ಹಾಗೂ ಕಲ್ಯಾಡಿ ಕೇಂದ್ರದಲ್ಲಿ ಉಂಡಿಗನಾಳು, ಕುರಾದಹಳ್ಳಿ, ನಾಗೇನಹಳ್ಳಿ, ಕರಗುಂದ ಪ್ರೌಢಶಾಲೆಯ ಒಟ್ಟು 189 ವಿದ್ಯಾರ್ಥಿಗಳು ಸೇರಿ ಹೋಬಳಿಯ 14 ಶಾಲೆಗಳಿಂದ 632 ವಿದ್ಯಾರ್ಥಿಗಳು ಈ ಸಾಲಿನಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಹೋಬಳಿ ಶಿಕ್ಷಣ ಸಂಯೋಜಕ ಬಿ. ಯೋಗೀಶ್ ತಿಳಿಸಿದರು. ಸಮರ್ಪಕ ಆಸನ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲಾಗಿದ್ದು, ಮೊಬೈಲ್ ಸ್ಕ್ವಾಡ್, ಸಿಟಿಂಗ್ ಸ್ಕ್ವಾಡ್ ವ್ಯವಸ್ಥೆಗೊಳಿಸಲಾಗಿದೆ ಎಂದು ವಿವರಿಸಿದರು.
ಜಾವಗಲ್ ಪರೀಕ್ಷಾಕೇಂದ್ರದ ಮುಖ್ಯಸ್ಥರು ಹಾಗೂ ಉಪಪ್ರಾಂಶುಪಾಲ ಯೋಗೀಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement