ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಏ. 4ಕ್ಕೆ ಉಪನ್ಯಾಸ

Rashmi Kasaragodu
Updated On : 30 Mar 2014, 11:31 am

ಹಾಸನ: ನಗರದ ಎ.ವಿ.ಕೆ ಕಾಲೇಜಿನ ರಜತ ಮಹೋತ್ಸವದ ನೆನಪಿನ 21ನೆಯ ದತ್ತಿ ಉಪನ್ಯಾಸ ಕಾರ್ಯಕ್ರಮ ಏ. 4 ರಂದು ಬೆಳಗ್ಗೆ 10ಕ್ಕೆ  ಕಾಲೇಜು ಆವರಣದಲ್ಲಿ ನಡೆಯಲಿದೆ. ಶಾಸ್ತ್ರೀಯ ಸಂಗೀತಕ್ಕೆ ಕನ್ನಡದ ಕೊಡುಗೆ ವಿಷಯ ಕುರಿತು ಗಾನಕಲಾ ಭೂಷಣ ಆರ್.ಕೆ.ಪದ್ಮನಾಭ ಉಪನ್ಯಾಸ ನೀಡುವರು. ಎಂ.ಸಿ.ಇ. ಕಾಲೇಜಿನ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಎ.ವಿ.ಕೆ. ಕಾಲೇಜಿನ ಉಪಾಧ್ಯಕ್ಷ ಬಿ.ಆರ್. ಗುರುದೇವ್, ಎಂ.ಸಿ.ಇ. ಕಾಲೇಜಿನ ಕಾರ್ಯದರ್ಶಿ ಆರ್.ಟಿ. ದ್ಯಾವೇಗೌಡ, ಖಜಾಂಚಿ ಆರ್. ಶೇಷಗಿರಿ, ಪ್ರಾಂಶುಪಾಲ ಡಾ.ಜೆ. ಶೈಲಜಾಕುಮಾರಿ ಭಾಗವಹಿಸುವರು.
ಪುಸ್ತಕ ಸ್ವಚ್ಛತೆ
ಪಾಂಡವಪುರ: ತಾಲೂಕಿನ ಹರಳಹಳ್ಳಿ ಗ್ರಾಮದ ಅಂಕೇಗೌಡ ಜ್ಞಾನ ಪ್ರತಿಷ್ಠಾನದ ಪುಸ್ತಕ ಮನೆಯಲ್ಲಿರುವ 3 ಲಕ್ಷ ಪುಸ್ತಕಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಿದರು.
ಮೈಸೂರಿನ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಶಿಬಿರದ ವಿದ್ಯಾರ್ಥಿ ಕಾರ್ಯಕ್ರಮಾಧಿಕಾರಿ ಡಾ.ಎಚ್.ಆರ್.ತಿಮ್ಮೇಗೌಡರ ಮಾರ್ಗದರ್ಶನದಲ್ಲಿ ತಾಲೂಕಿನ ಹರಳಹಳ್ಳಿ ನಡೆದಿರುವ ಶಿಬಿರದಲ್ಲಿ 18 ವಿದ್ಯಾರ್ಥಿನಿಯರು ಹಾಗೂ 75 ವಿದ್ಯಾರ್ಥಿಗಳೂ ಸೇರಿ 93 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಅವರಲ್ಲಿ ಒಂದು ಗುಂಪು ಗ್ರಾಮದಲ್ಲಿ ಸ್ಚಚ್ಚತೆಗೊಳಿಸುವ ಕಾರ್ಯದಲ್ಲಿ ತೊಡಗಿದ್ದರೆ, ಮತ್ತೊಂದು ಗುಂಪು ಪುಸ್ತಕ ಮನೆಯಲ್ಲಿ ಪುಸ್ತಕಗಳನ್ನು ವಿಂಗಡಣೆಯಲ್ಲಿ ತೊಡಗಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಇಲ್ಲಿರುವ ಪುಸ್ತಕಗಳನ್ನು ನೋಡಿ ಸಂತಸ ಪಟ್ಟಿದ್ದಾರೆ. ಪುಸ್ತಕ ಪ್ರೇಮಿ ಅಂಕೇಗೌಡರ ಸಾಧನೆ ಅದ್ಭುತವಾಗಿದೆ. ಇಂತಹ ಸ್ಥಳದಲ್ಲಿ ಶಿಬಿರ ಆಯೋಜಿಸಿರುವುದು ನಮಗೂ ಸಂತೋಷ ತಂದಿದೆ ಎಂದು ಪ್ರಾಧ್ಯಾಪಕಿ ಡಾ.ವಿನೋದಮ್ಮ ಹೇಳಿದರು.
ಹಲ್ಲೆಗೆ ಯತ್ನ
ಮಂಡ್ಯ: ಎಳನೀರು ಮಾರಾಟ ಮಾಡಲು ಬಂದಿದ್ದ ರೈತರೊಂದಿಗೆ ವ್ಯಾಪಾರಿಗಳು ಅನುಚಿತವಾಗಿ ವರ್ತಿಸಿ ಹಲ್ಲೆಗೆ ಯತ್ನಿಸಿದ ಘಟನೆ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದಿದೆ. ತಾಲೂಕಿನ ಮುರುಕನಹಳ್ಳಿ ಗ್ರಾಮದ ಗಿರೀಶ್ ಹಾಗೂ ಯೋಗೇಶ್ ಎಂಬುವರೇ ರೈತರ ಮೇಲೆ ಹಲ್ಲೆ ನಡೆಸಿದ ಎಳನೀರು ವ್ಯಾಪಾರಿಗಳು ಎಂದು ತಿಳಿದು ಬಂದಿದೆ. ಕಾರಿಗನಹಳ್ಳಿ ಗ್ರಾಮದ ರೈತ ಗಣೇಶ್, ಲಕ್ಷ್ಮೀರಾಜ್, ರಾಮಸ್ವಾಮಿ, ನವೀನ್, ದಿನೇಶ್ ಎಂಬುವರು ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆಯುತ್ತಿದ್ದ ಎಳನೀರು ಮಾರುಕಟ್ಟೆಗೆ ಸುಮಾರು 565 ಎಳನೀರು ತಂದಿದ್ದರು. ಖರೀದಿಸಲು ರೈತರ ಬಳಿ ಬಂದ ವ್ಯಾಪಾರಿಗಳಾದ ಗಿರೀಶ್ ಮತ್ತು ಯೋಗೇಶ್ ಅವರು ಒಂದು ಎಳನೀರಿಗೆ 15.50 ರು. ನೀಡುವುದಾಗಿ ಒಪ್ಪಂದ ಮಾಡಿಕೊಂಡು ಎಳನೀರನ್ನು ಲೆಕ್ಕಾಹಾಕಿ ತಮ್ಮ ವಾಹನಕ್ಕೆ ತುಂಬಿಕೊಂಡ ನಂತರ ಹಣ ಕೊಡುವ ವೇಳೆಯಲ್ಲಿ 15 ರು.ನಂತೆ ಹಣ ಕೊಡಲು ಮುಂದಾಗಿದ್ದಾರೆ. ಇದನ್ನು ರೈತರು ಪ್ರಶ್ನಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಎಳನೀರು ವ್ಯಾಪಾರಿಗಳು ನೀವು ಏನು ಬೇಕಾದರೂ ಮಾಡಿಕೊಳ್ಳಿ, ಯಾರಿಗೆ ಬೇಕಾದರೂ ದೂರು ಕೊಡಿ ಎಂದು ಅವಾಚ್ಯ ಶಬ್ದಗಳಿಂದ ರೈತರನ್ನು ನಿಂದಿಸಿಲ್ಲದೇ ಗಣೇಶ್ ಎಂಬ ರೈತನ ಮೇಲೆ ಯೋಗೇಶ್ ಎಂಬ ವ್ಯಾಪಾರಿ ಹಲ್ಲೆಗೆ ಯತ್ನಿಸಿದ್ದಾರೆ. ಇದನ್ನು ಖಂಡಿಸಿ ತಾಲೂಕು ರೈತಸಂಘದ ಪ್ರಧಾನ ಕಾರ್ಯದರ್ಶಿ ಕಾರಿಗನಹಳ್ಳಿ ಪುಟ್ಟೇಗೌಡ ಮತ್ತು ರೈತ ಮುಖಂಡ ಸ್ವಾಮಿ ಅವರು ಎಳನೀರು ಮಾರುಕಟ್ಟೆಯಲ್ಲಿ ಸಂಧಾನ ಮಾಡಲು  ಮುಂದಾದರೂ ಸಹ ತಮ್ಮ ಉದ್ಧಟತನವನ್ನು ಮುಂದುವರೆಸಿದ ವ್ಯಾಪಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ  ಪಟ್ಟಣ ಪೋಲೀಸರಿಗೆ ದೂರು ನೀಡಿದರು.
ಕಿರು ನಾಟಕ
ಮಂಡ್ಯ: ವಿಶಿಷ್ಟವಾಗಿ ವಿಶ್ವ ರಂಗಭೂಮಿ ದಿನಾಚರಣೆಯನ್ನು ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಆಚರಿಸಲಾಯಿತು. ಕಾಲೇಜಿನ ಪ್ರಾಶುಂಪಾಲೆ ಲೀಲಾ ಅಪ್ಪಾಜಿ ಸದಾ ಹೊಸತನದ ಹುಡುಕಾಟದಲ್ಲಿ ಇರುತ್ತಾರೆ ಎನ್ನುವುದಕ್ಕೆ ರಂಗಭೂಮಿ ದಿನಾಚರಣೆ ಪ್ರಯುಕ್ತ ಕಿರು ನಾಟಕ ಆಯೋಜಿಸಿದ್ದು ಸಾಕ್ಷಿಯಾಗಿತ್ತು. ಕಾಲೇಜಿನ ವನರಂಗದಲ್ಲಿ ಮ್ಯಾಗ್ಸೆಸೆಸೆ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಪಿ.ಸಾಯಿನಾಥ್  ಅವರ ಜಢಜ್ಠಣ ಛ್ಟಿಜಣ ಟ್ಟಢಜಡ ಝ್ಠ್ಟ್ಡ್ಜಡಿ ಅನುವಾದಿತ ಕೃತಿಯ ಬರ ಎಂದರೆ ಎಲ್ಲರಿಗೂ ಇಷ್ಟ. ಪುಸ್ತಕದ ಆಯ್ದ ಭಾಗದ ಕಿರು ನಾಟಕ ಪ್ರದರ್ಶನ ಏರ್ಪಡಿಸಿ, ಕೃತಿ ಮಹತ್ವ ಮತ್ತು ಸಮಾಜ ಅನೇಕ ವೈರುಧ್ಯಗಳನ್ನು ತಿಳಿಸಿಕೊಡುವ ಪ್ರಯತ್ನ ಇಲ್ಲಿ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement