ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಿದ್ಯಾರ್ಥಿ ವೃಂದಕ್ಕೆ ಉತ್ತಮ ಹವ್ಯಾಸ ಅವಶ್ಯ

Mainashree
Updated On : 2 May 2014, 1:14 am

ಚನ್ನರಾಯಪಟ್ಟಣ: ವಿದ್ಯಾರ್ಥಿಗಳು ತಮ್ಮ ಜೀವನದ ಮುಖ್ಯ ಪುಟಗಳಲ್ಲಿ ಸೇರಲು ಉನ್ನತ ಶಿಕ್ಷಣ ಗುರಿಯಾಗಿಸಿಕೊಂಡು ಉತ್ತಮ ಸಾಧನೆ ಮಾಡಿದರೆ ಮಾತ್ರ ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾಲಯ ಜೈವಿಕ ಶಿಕ್ಷಣ ವಿಭಾಗ ಮುಖ್ಯಸ್ಥೆ ಡಾ.ಗೀತಾ ಕಿವಿಮಾತು ಹೇಳಿದರು.
ಶ್ರವಣಬೆಳಗೊಳ ಬಾಹುಬಲಿ ತಾಂತ್ರಿಕ ಕಾಲೇಜು ವಾರ್ಷಿಕೋತ್ಸವ ಅನ್ವೇಷಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನಕ್ಕಾಗಿ ಒಂದು ಗುರಿಯಿಟ್ಟುಕೊಂಡು ಮುನ್ನುಗ್ಗಿದಾಗ ಮಾತ್ರ ಅವರ ಜೀವನ ಸುಖಮಯವಾಗಿರುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಹವ್ಯಾಸ ಬೆಳಸಿಕೊಂಡು ಉತ್ತಮ  ಗುರಿ ಸಾಧಿಸುವ ಕನಸನ್ನಿಟ್ಟುಕೊಂಡು ಮುನ್ನುಗ್ಗಿದಾಗ ಮಾತ್ರ ತಾವು ಉತ್ತಮ ವ್ಯಕ್ತಿಯಾಗಲು ಸಾಧ್ಯ ಎಂದು ತಿಳಿಸಿದರು.
ವಿದ್ಯಾರ್ಥಿ ಜೀವನದಲ್ಲಿ ತಾವು ಕೇವಲ ಪಠ್ಯಪುಸ್ತಕದಲ್ಲಿನ ಅಭ್ಯಾಸದ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ತಮ್ಮ ಮನಸ್ಸಿನಲ್ಲಿ  ಉತ್ತಮ ಭಾವನೆಗಳು ಮೂಡುವ ಜತೆಗೆ ಉತ್ಸಾಹ ಮೂಡಿ  ಉತ್ತಮ ಶಿಕ್ಷಣಕ್ಕೆ ಬುನಾದಿಯಾಗುತ್ತದೆ ಎಂದು ತಿಳಿಸಿದರು.
ಜೀವನದಲ್ಲಿ ಉತ್ತಮ ಭವಿಷ್ಯವನ್ನು ಮುಂದಿಟ್ಟುಕೊಂಡು ಮನ್ನುಗ್ಗಿದಾಗ ಮಾತ್ರ ಆತ ಉತ್ತಮ ಸಾಧನೆ ಮಾಡಬಲ್ಲ. ಪೋಷಕರು ಹಾಗೂ ಇತರರ ಒತ್ತಡಕ್ಕೆ ಮಣಿದು ಕೇವಲ ಅವರನ್ನು ಮೆಚ್ಚಿಸಲು ಹೋದರೆ ಉತ್ತಮ ಗುರಿ ಸಾಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ವಿದ್ಯಾರ್ಥಿ ಜೀವನದಲ್ಲಿ ಗುರಿ ಸಾಧನೆ ಮುಖ್ಯ ಉದ್ದೇಶವಾಗಿಟ್ಟುಕೊಂಡು ಶಾಂತಿ ಮತ್ತು ಅಹಿಂಸಾ ತತ್ವವನ್ನು ಪಾಲನೆ ಮಾಡಿದಾಗ ಮುಂದಿನ ಜೀವನದಲ್ಲಿಯೂ ಅದು ರೂಡಿಯಲ್ಲಿರುತ್ತದೆ ಎಂದು ತಿಳಿಸಿದರು.
ಪ್ರಾಂಶುಪಾಲ ಡಾ.ರಾಮೇಗೌಡ, ಕಾಲೇಜು ಡೀನ್ ಗೊಮ್ಮಟೇಶ ರಾವಣನವರ್, ಗ್ರಾಪಂ ಅಧ್ಯಕ್ಷ ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಉತ್ತಮ ಅಂಕ ಗಳಿಸಿದ ರೋಹಿತ್ ಜೈನ್, ಸುರಭಿ ಹಾಗೂ ಸೋಮಶೇಖರ್ ಮತ್ತಿತರರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ನಂತರ ಹಲವು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ನರೇಂದ್ರ ಮೋದಿ ಅನುಕರಿಸಿ ರುಮಾಲು ಧರಿಸಿದ ವಿದ್ಯಾರ್ಥಿಗಳು ಗಮನ ಸೆಳೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement